ಕನ್ನಡದ ಸೀರಿಯಲ್ ಜೋಡಿ ಅಂದ್ರೆ ನಿನ್ನಿಂದಲೇ ಧಾರಾವಾಹಿಯ ನಟ ದೀಪಕ್ ಹಾಗೂ ಸೀತವಲ್ಲಭ ಧಾರಾವಾಹಿಯ ಅಂಕಿತಾ ಅಲಿಯಾಸ್ ಚಂದನ ಅವರು ತಮ್ಮ ಆಸೆ ಯಂತೆ ಜುಲೈ 1ಕ್ಕೆ ಜೋರಾಗಿಯೆ ನಿಶ್ಚಿರ್ತಾಥ ಕಾರ್ಯಕ್ರಮವನ್ನು ಮಾಡಿಕೊಂಡಿರೋದು ತಿಳಿದಿದೆ. ಇದೀಗ ಮದುವೆಯ ತರಾತುರಿಯಲ್ಲಿದೆ ಈ ಜೋಡಿ.
ಅದಾದ ಬಳಿಕ ದೀಪಕ್ ಹಾಗೂ ಚಂದನ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿದ್ರು. ಒಟ್ಟು ಮೂರು ಕಾಸ್ಟ್ಯೂಮ್ ಧರಸಿ ಶೂಟ್ ಮಾಡಿಸಿದ್ರು.. ಮೊದಲನೆಯದ್ದು ಟ್ರೆಡಿಷನಲ್ ಲುಕ್ನಲ್ಲಿ ಈ ಜೋಡಿ ಮಿಂಚಿದ್ರೆ.. ಎರಡನೇ ಕಾಸ್ಟ್ಯೂಮ್ ಇಂಡೊ ವೆಸ್ರ್ಟನ್ ಲುಕ್ನಲ್ಲಿ ಮುದ್ದಾಗಿ ಕಾಣಿಸಿದ್ರೂ ಇನ್ನೂ ಮೂರನೇ ಲುಕ್ ಅಂದ್ರೆ ಫಯಲ್ ಮೋಡ್ನಲ್ಲಿ ದೀಪಕ್ ಹಾಗೂ ಚಂದು ಸೂಪರ್ ಆಗಿ ಶೂಟ್ ಮಾಡಿಸಿದ್ದಾರೆ.
ಆದರೆ ಇದೀಗ ದೀಪಕ್ ಚಂದನ ಮದುವೆ ಡೇಟ್ ಫಿಕ್ಸ್ ಆಗಿ ಮಾತ್ರವಲ್ಲದೇ ಲಗ್ನಪತ್ರಿಕೆ ಹಂಚಿಕೆ ಕಾರ್ಯಕ್ರಮ ಎರಡು ಮನೆಯಲ್ಲು ಜರಾಗಿದೆ. ಹೌದು, ಚಂದನ ದೀಪಕ್ ಮದುವೆ ಡಿಸೆಂಬರ್ 1 ಹಾಗೂ 2ನೇ ತಾರೀಖು ಅದ್ಧೂರಿಯಾಗಿ ನೆಲಮಂಗಲದ ಒಂದು ರೆಸಿಡೆನ್ಸಿಯಲ್ಲಿ ನೆಡೆಯಲಿದೆ.
ಈಗಾಗಲೇ ಎರಡು ಕುಟುಂಬದವರು ಕೂಡ ಮದುವೆ ತಯಾರಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಶಾಂಪಿಂಗ್ ಕೆಲಸಗಳೂ ಮುಗಿದಿದ್ದು.. ಬ್ಯಾಕ್ರೌಂಡ್ಗೆ ತಕ್ಕಂತೆ ಕಾಸ್ಟ್ಯೂಮ್ ಡಿಸೈನ್ ಮಾಡಿಸಿದ್ದಾರಂತೆ ಈ ಜೋಡಿ.
ಇನ್ನೂ ಮೆಹಂದಿ ಹಾಗೂ ಹಳದಿ ಶಾಸ್ತ್ರ ಕಾರ್ಯಕ್ರಮ ನಟಿ ಚಂದನ ಅವ್ರ ಮನೆಯಲ್ಲಿ ನೆಡೆಯಲಿದೆ.. ಈ ಕಾರ್ಯಕ್ರಮಗಳಿಗೆ ವಿಭಿನ್ನ ಥೀಮ್ಗಳನ್ನು ಕೂಡ ಮಾಡಿಕೊಂಡಿದ್ದಾರಂತೆ.. ಮತ್ತೊಂದು ವಿಶೇಷ ಅಂದ್ರೆ ನಿನ್ನಯ ಎಪಿಸೋಡ್ನಲ್ಲಿ ನಟಿ ಕಾವ್ಯಾ ಗೌಡ ಅವರ ಮದುವೆ ಡೇಟ್ ಬಗ್ಗೆ ನಾವು ನಿಮಗೆ ತಿಳಿಸಿದ್ವಿ.. ಕಾವ್ಯಾ ಸೋಮಶೇಖರ್ ಮದುವೆ ಡಿಸೆಂಬರ್ 1 ಹಾಗೂ 2ನೇ ತಾರಿಖಿಗೆ ನಡೆಯಲಿದೆ.. ಈ ಕಡೆ ಚಂದು ಹಾಗೂ ದೀಪಕ್ ಮದುವೆ ಕೂಡ ಅದೇ ದಿನಾಂಕ ನಿಗದಿಯಾಗಲಿದೆ. ಕನ್ನಡ ಕಿರುತೆರೆಯ ನಟ ನಟಿಯರ ಮದುವೆ ಒಂದೇ ದಿನದಂದು ನಡಿತಾಯಿರೊದು ವಿಶೇಷ.
ನಾವೂ ಮದುವೆ ಡೇಟ್ಸ್ ಫೇಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಫಿಕ್ಸ್ ಮಾಡಬೇಕು ಅಂತಾ ಪ್ಲಾನ್ ಮಾಡಿದ್ವಿ.. ಆದ್ರೇ ಡೇಟ್ ಚನ್ನಾಗಿದೆ ಅಂತಾ ಮನೆಯವ್ರು ಹೇಳಿದಾಗ ನಾವೂ ಕೂಡಾ ಓಕೆ ಅಂದ್ವಿ ಹಾಗಾಗಿ ಎಲ್ಲವೂ ಕೂಡಾ ಅರ್ಜೆಂಟ್ ಆಗಿಯೇ ನಡೆತಾಯಿದೆ ಎಂದಿದ್ದಾರೆ ದೀಪಕ್.
ದೀಪಕ್ ಜೋಡಿ ಆಡಿಷನ್ ಹಾಗೂ ಕೆಲವೊಂದು ಶೂಟ್ಗಳಲ್ಲಿ ಭೇಟಿಯಾಗಿ.. ಸೋಶಿಯಲ್ ಮೀಡಿಯಾ ಮೂಲಕ ಮಾತು ಶುರು ಮಾಡಿ.. ಇಬ್ಬರ ನಡುವೆ ಒಳ್ಳೆ ಫ್ರಂಡ್ಶಿಪ್ ಆಗಿ. ಆ ಸ್ನೇಹ ಪ್ರೀತಿಗೆ ತಿರುಗಿ.. ಇಬ್ಬರ ಮನೆಯಲ್ಲಿಯು ಒಪ್ಪಸಿ ಇದೀಗ ಹೊಸ ಜೀವನಕ್ಕೆ ಕಾಲಿಡಲು ಈ ಹಕ್ಕಿಗಳು ಕಾತುರರಾಗಿದ್ದಾರೆ..ಅವ್ರ ದಾಂಪತ್ಯ ಜೀವನ ಖುಷಿಯಾಗಿರಲಿ ಎಂಬುವುದು ನಮ್ಮ ಆಶಯ.