ಇಡೀ ಭಾರತೀಯ ಚಿತ್ರರಂಗ ಸೌತ್​ ಸಿನಿ ದುನಿಯಾದತ್ತ ತಿರುಗಿನೋಡುವಂತೆ ಮಾಡಿ, ದಾಖಲೆ ಮೇಲೆ ದಾಖಲೆ ಸೃಷ್ಟಿಸಿದ್ದ ಸಿನಿಮಾ ಕೆಜಿಎಫ್​. ಕೆಜಿಎಫ್ ಚಾಪ್ಟರ್​- 2 ಯಾವಾಗ ರಿಲೀಸ್​ ಆಗುತ್ತೆ ಅಂತ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಪೋಸ್ಟರ್​​ ಹಾಗೂ ಟ್ರೇಲರ್ ಮೂಲಕ ಈಗಾಗಲೇ ಕೆಲವು ದಾಖಲೆ ಬರೆದಿರೋ ಕೆಜಿಎಫ್​-2 ಚಿತ್ರ ಬಿಡುಗಡೆಗೂ ಮುನ್ನ​ ತನ್ನ ಲಿಸ್ಟ್​ಗೆ ಮತ್ತೊಂದು ರೆಕಾರ್ಡ್ ಸೇರ್ಪಡೆ ಮಾಡಿಕೊಂಡಿದೆ. ಅದೇನಂದ್ರೆ ಕೆಜಿಎಫ್ ಚಾಪ್ಟರ್ 2 ಆಡಿಯೋ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದೆ.

ಮತ್ತೊಮ್ಮೆ ಲಹರಿ ಆಡಿಯೋ ಕಂಪನಿಗೆ ಕೆಜಿಎಫ್ ಆಡಿಯೋ ರೈಟ್ಸ್ ದಕ್ಕಿದೆ. ಐದು ಭಾಷೆಯ ಆಡಿಯೋ ರೈಟ್ಸ್ ಪಡೆದಿರುವ ಲಹರಿ ಕಂಪನಿಯೊಂದಿಗೆ ಇಂದು ಬೆಳಗ್ಗೆ 11 ಗಂಟೆಗೆ ಚಿತ್ರತಂಡ ಅಗ್ರಿಮೆಂಟ್​​​​​ಗೆ ಸೈನ್ ಮಾಡಿದೆ. ಈ ಹಿಂದೆ ಲಹರಿ ಕಂಪನಿ ಕೆಜಿಎಫ್ ಚಾಪ್ಟರ್ 1 ಆಡಿಯೋ ರೈಟ್ಸ್ ಕೂಡ ಖರೀದಿ ಮಾಡಿತ್ತು. ಈ ಬಾರಿ ಹೊಂಬಾಳೆ ಫಿಲಂಸ್​​ನಲ್ಲೇ ಕೆಜಿಎಫ್ -2 ಆಡಿಯೋ  ಹೊರಬರುತ್ತೆ ಎನ್ನಲಾಗಿತ್ತು. ಆದ್ರೆ ಮತ್ತೆ ಲಹರಿ ಆಡಿಯೋ ಕಂಪನಿಗೆ ಕೆಜಿಎಫ್ ಆಡಿಯೋ ರೈಟ್ಸ್ ಸಿಕ್ಕಿದ್ದು, ಈ ಬಗ್ಗೆ ನ್ಯೂಸ್​ ಫಸ್ಟ್​​​​​ಗೆ ಲಹರಿ ಕಂಪನಿಯ ಮುಖ್ಯಸ್ಥ ವೇಲು ಅವರಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಅಂದ್ಹಾಗೆ ಇಂದು ಒಂದೇ ದಿನ ಹೊಂಬಾಳೆ ಫಿಲಂಸ್​​ನಿಂದ ಎರಡೆರಡು ಸಿಹಿ ಸುದ್ದಿ ಹೊರಬಿದ್ದಿದೆ. ಒಂದು ಭಾರೀ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿರೋದು, ಮತ್ತೊಂದು ನಟ  ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಪವನ್ ಕುಮಾರ್ ಕಾಂಬಿನೇಷನ್​ನ ದ್ವಿತ್ವ ಸಿನಿಮಾದ ಟೈಟಲ್ ಇಂದು ಲಾಂಚ್ ಆಗಿದೆ.

ಇದನ್ನೂ ಓದಿ: ಧೂಳೆಬ್ಬಿಸಿದ ಪೋಸ್ಟರ್; ಲೂಸಿಯಾ ಪವನ್ ಕಲ್ಪನೆಯಲ್ಲಿ ದ್ವಿತ್ವ ಅವತಾರ ಎತ್ತಿದ ಪುನೀತ್ ರಾಜ್​ಕುಮಾರ್

The post ದಾಖಲೆಯ ಮೊತ್ತಕ್ಕೆ ಸೇಲ್ ಆಯ್ತು ಕೆಜಿಎಫ್​-2 ಆಡಿಯೋ ರೈಟ್ಸ್​​ appeared first on News First Kannada.

Source: newsfirstlive.com

Source link