ದಾಖಲೆ ಇಲ್ಲದೆ ಮಾತಾಡೋದು ಕಾಂಗ್ರೆಸ್​ಗೆ ಚಾಳಿ; ಕೆ.ಎಸ್​​ ಈಶ್ವರಪ್ಪ


ಕೊಪ್ಪಳ: ಬಿಟ್‌ ಕಾಯಿನ್‌ ವಿಚಾರವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕೆ.ಎಸ್​ ಈಶ್ವರಪ್ಪ, ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪರ್ಧಾತ್ಮಕವಾಗಿ ಮಾತಾಡ್ತಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಮಾತನಾಡುತ್ತಿದ್ದರು. ಈಗ ಈ ಸಾಲಿಗೆ ಪ್ರಿಯಾಂಕ್‌ ಖರ್ಗೆ ಸೇರ್ಪಡೆ ಆಗಿದ್ದಾರೆ. ಯಾರೂ ಕೂಡ ಒಂದು ಪೀಸ್ ಕಾಗದದ ದಾಖಲೆ ಕೊಡ್ತಿಲ್ಲ ಎಂದರು.

ಹೀಗೆ ದಾಖಲೆ ಇಲ್ಲದ ಹೇಳಿಕೆ ಕೊಡುವುದು ಕಾಂಗ್ರೆಸ್​​ಗೆ ಚಾಳಿಯಾಗಿ ಬಿಟ್ಟಿದೆ ಅಂತ ವಾಗ್ದಾಳಿ ನಡೆಸಿದ್ದಾರೆ. ಬಿಟ್ ಕಾಯಿನ್ ಹಗರಣದಲ್ಲಿ ಐಎಎಸ್ ಅಧಿಕಾರಿಗಳೂ ಇದ್ದಾರೆ ಅಂತಾ ಹೇಳ್ತಾರೆ. ತಾಕತ್ತು ಇದ್ರೆ ಆ ಎಲ್ಲ ‌ದಾಖಲೆ ಬಿಡುಗಡೆ ಮಾಡಲಿ ಅಂತಾ ಈಶ್ವರಪ್ಪ ಸವಾಲು ಹಾಕಿದ್ದಾರೆ..

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ CM ಬೊಮ್ಮಾಯಿ ಬಲಿ ಪಡಿಯೋದು 100% ಗ್ಯಾರೆಂಟಿ -ಪ್ರಿಯಾಂಕ್ ಖರ್ಗೆ

News First Live Kannada


Leave a Reply

Your email address will not be published. Required fields are marked *