ದಾಖಲೆ ಬರೆದ ಮೋದಿ; ಇದೇ ಮೊದಲ ಬಾರಿ ಎಕ್ಸ್​​ಪ್ರೆಸ್​​ವೇನಲ್ಲಿ ಲ್ಯಾಂಡ್​ ಆದ ಪ್ರಧಾನಿ


ಲಖನೌ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ದಾಖಲೆ ಬರೆದಿದ್ದು, ಇದೇ ಮೊದಲ ಬಾರಿಗೆ ಎಕ್ಸ್​ಪ್ರೆಸ್​ವೇನಲ್ಲಿ ಲ್ಯಾಂಡ್​ ಆಗಿದ್ದಾರೆ.  ಇಲ್ಲಿಯವರೆಗೂ ಯಾವುದೇ ಪ್ರಧಾನಿ ಭಾರತದಲ್ಲಿ ಈ ರೀತಿಯಾಗಿ ಲ್ಯಾಂಡ್​ ಆಗಿರುವ ಉದಾಹರಣೆ ಇಲ್ಲ.

ಈ ರಸ್ತೆ ವಿಶೇಷತೆ ಏನು? 

ಭಾರತದ ಅತೀ ಉದ್ದದ ಎಕ್ಸ್​​ಪ್ರೆಸ್ ಮಾರ್ಗವಾಗಿರುವ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್​ಪ್ರೆಸ್ ​​ಹೆದ್ದಾರಿಯ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುಲ್ತಾನ್‌ಪುರ ಜಿಲ್ಲೆಯ ಕರ್ವಾಲ್ ಖೇರಿಗೆ ಆಗಮಿಸಿದ್ದಾರೆ. ವಿಶೇಷ ಎಂದರೇ ಏರ್​ ಪೋರ್ಸ್ C-130J ಸೂಪರ್ ಹರ್ಕ್ಯುಲಸ್ ​​ವಿಮಾನದಲ್ಲಿ ಆಗಮಿಸಿದ್ದರು.

24 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 340 ಕಿಲೋ ಮೀಟರ್ ಹೆದ್ದಾರಿ ನಿರ್ಮಾಣವಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಈ ದಿನ ಉತ್ತರ ಪ್ರದೇಶ ಬೆಳವಣಿಗೆಗೆ ವಿಶೇಷ ದಿನವಾಗಿದ್ದು, ಯುಪಿಯ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *