ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ RRR ಸಿನಿಮಾ ದಿನಕ್ಕೊಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಮೊನ್ನೆ ತಾನೆ ಥ್ರಿಬಲ್ ಆರ್ ಸಿನಿಮಾದ ನಾಟು ನಾಟು ಹಾಡನ್ನು ಬಿಡುಗಡೆ ಮಾಡಿ ಸಖತ್ ಹವಾ ಸೃಷ್ಟಿ ಮಾಡಿದ್ದ ಥ್ರಿಬಲ್ ಆರ್ ಸಿನಿಮಾ. ಈಗ ಮತ್ತೊಂದು ವಿಷಯವಾಗಿ ಪ್ರಚಾರಕ್ಕೆ ಬಂದಿದೆ. ಥ್ರಿಬಲ್ ಆರ್ ಸಿನಿಮಾ 2022 ರ ಜನವರಿ 7 ರಂದು ವಿಶ್ವಾದ್ಯಂತ ಏಕಕಾಲಾದಲ್ಲಿ ಬಿಡುಗಡೆ ಆಗಲು ಸಖಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಅಮೆರಿಕಾ ಒಂದರಲ್ಲಿಯೇ 1000 ಕ್ಕೂ ಹೆಚ್ಚು ಸ್ಕ್ರೀನ್ಗಳ ಮೇಲೆ ಬಿಡುಗಡೆ ಆಗುವುದರ ಮೂಲಕ ಯುಎಸ್ನಲ್ಲಿ ಅತೀ ಹೆಚ್ಚು ಸ್ಕ್ರೀನ್ಗಳ ಮೇಲೆ ಬಿಡುಗಡೆ ಆಗುತ್ತಿರುವ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಿಂದೆ ಅಮೇರಿಕಾದಲ್ಲಿ ಪವನ್ ಕಲ್ಯಾಣ್ ನಟನೆಯ ”ಅಜ್ಞಾತವಾಸಿ” 207 ಪರದೆಗಳ ಮೇಲೆ ಸಿನಿಮಾ ಬಿಡುಗಡೆ ಆಗಿದ್ದೇ ಅತೀ ಹೆಚ್ಚು. ಸದ್ಯ ”ಥ್ರಿಬಲ್ ಆರ್” ಇನಿಮಾ ಅಮೇರಿಕಾದಲ್ಲೂ ಹೊಸ ದಾಖಲೆ ಬರೆಯಲು ಸಿದ್ಧವಾಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇದನ್ನೂ ಓದಿ: ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ರಾಜಮೌಳಿ?
The post ದಾಖಲೆ ಬರೆದ RRR: ಜ.7ಕ್ಕೆ ಅಮೆರಿಕಾ ಒಂದರಲ್ಲೇ ಬರೋಬ್ಬರಿ 1000ಕ್ಕೂ ಸ್ಕ್ರೀನ್ಸ್ ಮೇಲೆ ರಿಲೀಸ್ appeared first on News First Kannada.