ಹಾವೇರಿ: ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು ಒಂದೇ ವಾರದ ಅಂತರದಲ್ಲಿ ತಂದೆ ಹಾಗೂ ಮಗ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಸದಸ್ಯರನ್ನ ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಭೌತಶಾಸ್ತ್ರ ಭೋದನೆ ಮಾಡುತ್ತಿದ್ದ ಉಪನ್ಯಾಸಕ ಶಂಕರಗೌಡ ಹಾಗೂ ಅವರ ತಂದೆ ಕೊರೊನಾಗೆ ಬಲಿಯಾದವರು. ತಂದೆ ಸೋಂಕಿಗೊಳಗಾಗಿದ್ದ ವೇಳೆ ಮಗ ಶಂಕರ ಗೌಡ ಆರೈಕೆ ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ತಂದೆ ಸಾವನ್ನಪ್ಪಿದ್ದರು. ಇದಾದ ಕೆಲವೇ ದಿನಗಳಲ್ಲಿ ಶಂಕರಗೌಡ ಸೋಂಕಿಗೆ ತುತ್ತಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಪುತ್ರ ಕೂಡ ಸಾವನ್ನಪ್ಪಿದ್ದಾರೆ. ಶಂಕರಗೌಡ ಕಳೆದ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು.. ಮನೆಗೆ ಹಿರಿಯ ಮಗನಾಗಿದ್ದರು ಎನ್ನಲಾಗಿದೆ.

The post ದಾರುಣವಾಯ್ತು ಕೊರೊನಾ: ಒಂದೇ ವಾರದಲ್ಲಿ ತಂದೆ- ಮಗನನ್ನು ಕಳೆದುಕೊಳ್ತು ಕುಟುಂಬ appeared first on News First Kannada.

Source: newsfirstlive.com

Source link