ದಾರುಣ ಘಟನೆ; ಪಕ್ಕದ ಮನೆಯ ಗೋಡೆ ಕುಸಿದು ಮಲಗಿದ್ದಲ್ಲೇ ದಂಪತಿ ಜೀವಂತ ಸಮಾಧಿ


ಚಿತ್ರದುರ್ಗ: ಮಳೆಯ ರಭಸಕ್ಕೆ ಗುಡಿಸಲಿನ ಗೋಡೆ ಕುಸಿದುಬಿದ್ದ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಚಿಕ್ಕಸಿದ್ದವ್ವನಹಳ್ಳಿ ಗ್ರಾಮದ ಹೋ.ಚಿ ಬೋರಯ್ಯನಹಟ್ಟಿಲ್ಲಿ ನಡೆದಿದೆ.

ಚನ್ನಕೇಶವ (26), ಸೌಮ್ಯ (20) ಮೃತ ದಂಪತಿಗಳು. ಮಳೆಗೆ ಕ್ಯಾಸಣ್ಣ ಎಂಬುವವರ ಮನೆ ಗೋಡೆ ಶಿಥಿಲಗೊಂಡಿತ್ತು. ಈ ಗೋಡೆ ಪಕ್ಕದಲ್ಲಿದ್ದ ಇನ್ನೊಂದು ಗುಡಿಸಲಿನ ಮೇಲೆ ಬಿದ್ದು ಅವಘಡ ಸಂಭವಿಸಿದೆ.

ಇನ್ನು ಕೂದಲೆಳೆ ಅಂತರದಲ್ಲಿ ಮತ್ತೋರ್ವ ಪಾರಾಗಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *