ದಾವಣಗೆರೆ:  ಬೆಣ್ಣೆನಗರಿ ದಾವಣಗೆರೆಯಲ್ಲಿ ಕೊರೊನಾ ಪ್ರಕರಗಳು ಹೆಚ್ಚಾದ ಹಿನ್ನೆಲೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರಲಾಗಿದೆ.

ಸೋಂಕು ನಿಯಂತ್ರಣಕ್ಕೆ ತರಳು ಜಿಲ್ಲಾಡಳಿತ ಹೊಸ ಮಾರ್ಗಸೂಚಿ ತಂದಿದ್ದು, 10ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಇರೋ ಹಳ್ಳಿಗಳನ್ನ ಸೀಲ್ ಡೌನ್ ಮಾಡಲಾಗ್ತಿದೆ. ಈ ಮೂಲಕ ಈವರೆಗೆ ಜಿಲ್ಲೆಯ ಕೈದಾಳಿ, ಕುರ್ಕಿ, ಕುಕ್ಕವಾಡ ಸೇರಿದಂತೆ 25 ಹಳ್ಳಿಗಳು ಸೀಲ್​ಡೌನ್ ಆಗಿವೆ.

ಹಳ್ಳಿಗಳಿಂದಲೇ ಹೆಚ್ಚಿನ ಕೇಸ್ ಬರುತ್ತಿರುವ ಹಿನ್ನಲೆ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೃಷಿ ಚಟುವಟಿಕೆಗೆ ಅವಕಾಶ ನೀಡಿ ಅನಗತ್ಯವಾಗಿ ಓಡಾಡೋರ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.

The post ದಾವಣಗೆರೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ, ಸೀಲ್​ಡೌನ್ ಅಸ್ತ್ರ appeared first on News First Kannada.

Source: newsfirstlive.com

Source link