ದಾವಣಗೆರೆಯಲ್ಲಿ ಭರ್ಜರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿಹೋಯ್ತು ಟ್ರ್ಯಾಕ್ಟರ್

ದಾವಣಗೆರೆಯಲ್ಲಿ ಭರ್ಜರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿಹೋಯ್ತು ಟ್ರ್ಯಾಕ್ಟರ್

ದಾವಣಗೆರೆ: ಜಿಲ್ಲೆಯಾದ್ಯಂತ ವರುಣ ತನ್ನ ಆರ್ಭಟ ಮುಂದುವರೆಸಿದ್ದು ಮಳೆ ನೀರಿನ ರಭಸಕ್ಕೆ ಟ್ರ್ಯಾಕ್ಟರೊಂದು ನೀರಿನಲ್ಲಿ ಕೊಚ್ಚಿಹೋದ ಘಟನೆ ಕಡ್ಲೆಬಾಳು ಗ್ರಾಮದಲ್ಲಿ ನಡೆದಿದೆ.

ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಗ್ರಾಮದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಟ್ರ್ಯಾಕ್ಟರ್ ಕ್ಯಾರಿಯರ್​ನಲ್ಲಿ ನೀರು ತುಂಬಿದಂತೆ ಮೆಲ್ಲನೆ ಜಾರಿಕೊಳ್ಳುತ್ತಾ ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಕೊಚ್ಚಿಕೊಂಡು ಹೋಗಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರೀ ಮಳೆ: ತಡರಾತ್ರಿ ಮನೆಗಳಿಗೆ ನುಗ್ಗಿದ ನೀರು.. ನೂರಾರು ಎಕರೆ ಬೆಳೆ ನಾಶ

ಇನ್ನು ಭಾರೀ ಮಳೆಗೆ ಮಾಗಾನಹಳ್ಳಿ ಮಧ್ಯದ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು ನಾಟಿಗೆ ಹಾಕಿದ್ದ ಭತ್ತದ ಮಡಿಯೂ ಕೂಡ ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಕೋಡಿ ಬಿದ್ದ ಕೆರೆಗಳಿಂದ ಮೀನು ಹಿಡಿಯಲು ಜನ ಆಗಮಿಸಿದ್ದು ಮಳೆಯಲ್ಲಿ ನೆನೆಯುತ್ತಲೇ ಮೀನು ಹಿಡಿಯುವ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿವೆ.

The post ದಾವಣಗೆರೆಯಲ್ಲಿ ಭರ್ಜರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿಹೋಯ್ತು ಟ್ರ್ಯಾಕ್ಟರ್ appeared first on News First Kannada.

Source: newsfirstlive.com

Source link