ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಜಿಲ್ಲೆಯಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಜೋರಾಗ್ತಿದ್ದು ಜನರಿಗೆ ಸಂಕಷ್ಟ ತಂದೊಡ್ಡಿದೆ.

ವರ್ಷಧಾರೆಯ ನರ್ತನಕ್ಕೆ ಸತತ ಆರು ದಿನಗಳಿಂದ ಹರಿಹರ ತಾಲೂಕಿನ ಸಾರಥಿ-ಚಿಕ್ಕಬಿದರಿ ಮಧ್ಯದ ಸಂಪರ್ಕ ಕಡಿತಗೊಂಡಿದ್ದು ಜನಸಂಚಾರ ಸಂಪೂರ್ಣವಾಗಿ ಬಂದ್​ ಆಗಿದೆ. ಇದರಿಂದ ಮನೆಯಲ್ಲೇ ಇರೋ ಜನರು ವರುಣನಿಗೆ ಹಿಡಿಶಾಪ ಹಾಕ್ತಿದ್ದಾರೆ.

ನೂರು ಮೀಟರ್ ನಷ್ಟು ಅಗಲವಾಗಿ ಹರಿಯುತ್ತಿರುವ ನೀರು ರಸ್ತೆ ಸಂಪರ್ಕವನ್ನ ಕಡಿತಗೊಳಿಸಿದೆ. ಇನ್ನು ಹೇಗೋ ಎಸ್​ಎಸ್​ಎಲ್​ಸಿ ಎಕ್ಸಾಂ ಬರೆಯಲು ವಿದ್ಯಾರ್ಥಿಗಳು ಹೋಗಿದ್ದು ವಾಪಸ್​ ಮನೆಗೆ ಸೇರುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

The post ದಾವಣಗೆರೆಯಲ್ಲೂ ವರುಣನ ಆರ್ಭಟ.. ಹೊಳೆಯಂತಾದ ರಸ್ತೆಗಳು..! appeared first on News First Kannada.

Source: newsfirstlive.com

Source link