ದಾವಣಗೆರೆ: ಊರಲ್ಲಿ ಅಪ್ಪಳಿಸಿದ ಸಿಡಿಲು ರಸ್ತೆಬದಿಯಿದ್ದ ಬೇಕರಿಯನ್ನು ಧ್ವಂಸ ಮಾಡಿತು | A roadside bakery burnt to ashes after lightning strikes in Jagaluru ARB


ದಾವಣಗೆರೆ: ಈ ಬೇಕರಿ (bakery) ಮಾಲೀಕರ ದುರಂತ ನೋಡಿ ಮಾರಾಯ್ರೇ. ಪೂರ್ತಿ ಬೇಕರಿ ಅದರೊಳಗಿದ್ದ ಎಲ್ಲ ಸಾಮಾನುಗಳು ಸುಟ್ಟು ಕರಕಲಾಗಿವೆ. ಅವುಗಳನ್ನು ಗುರುತು ಕೂಡ ಹಿಡಿಯಲಾಗದು, ಆ ಪರಿ ಸುಟ್ಟುಹೋಗಿವೆ, ಇದು ಸಿಡಿಲು (lightning) ಬಡಿದು ಆಗಿರುವ ದುರಂತ. ಅದರೆ ಸೋಜಿಗ ಹುಟ್ಟಿಸುವ ಸಂಗತಿ ಏನು ಗೊತ್ತಾ? ಬೇಕರಿಯಲ್ಲಿದ್ದ ಎರಡು ಸಿಲಿಂಡರ್ ಗಳು (gas cylinders) ಸ್ಫೋಟಗೊಂಡಿಲ್ಲ. ಹಾಗೇನಾದರೂ ಅಗಿದ್ದರೆ ಜನರ ಪ್ರಾಣಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಅಂದಹಾಗೆ ಈ ಕರಿಬಸವೇಶ್ವರ ಬೇಕರಿ ಇದ್ದಿದ್ದು ದಾವಣಗೆರೆಯ ಜಗಳೂರು ಪಟ್ಟಣದಿಂದ ಚಳ್ಳಕೆರೆಗೆ ಹೋಗುವ ರಸ್ತೆಯಲ್ಲಿ.

ಬೇಕರಿಯೊಳಗಿರುವ ಕಟ್ಟೆಯೊಂದರ ಮೇಲೆ ತಲೆಮೇಲೆ ಕೈಹೊತ್ತು ಒಬ್ಬ ಮಹಿಳೆ ರೋದಿಸುತ್ತಿದ್ದಾರೆ. ಪ್ರಾಯಶಃ ಅವರೇ ಬೇಕರಿಯ ಮಾಲೀಕರಿರಬಹುದು. ನಿಸ್ಸಂದೇಹವಾಗಿ ಅವರಿಗೆ ಬಹಳ ದೊಡ್ಡಮಟ್ಟದ ಹಾನಿಯಾಗಿದೆ. ಅಂಗಡಿ ಮೇಲೆ ಅವರು ವಿಮೆ ಮಾಡಿಸಿದ್ದರೋ ಇಲ್ಲವೋ ಗೊತ್ತಿಲ್ಲ ಮಾರಾಯ್ರೇ. ಒಂದು ಪಕ್ಷ ವಿಮೆ ಇಲ್ಲ ಅಂತಾದರೆ ಅವರು ತಮ್ಮ ಬೇಕರಿ ವ್ಯವಹಾರವನ್ನು ಅಕ್ಷರಶಃ ಜೀರೋನಿಂದ ಪುನರಾರಂಭಿಸಬೇಕಾಗುತ್ತದೆ.

ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬೇಕರಿ ಮುಂದೆ ಫೈರ್ ಎಂಜಿನ್ ಕಾಣಿಸುತ್ತಾದರೂ ಇಲ್ಲಿನ ಸನ್ನಿವೇಶ ನೋಡಿದರೆ ಅದು ಬರೋದು ತಡವಾಗಿದೆ ಅನಿಸುತ್ತೆ.

ಸಾಮಾನ್ಯವಾಗಿ ಸಿಡಿಲು ಊರುಗಳಲ್ಲಿ ಅಪ್ಪಳಿಸುವುದಿಲ್ಲ. ಊರ ಹೊರಗೆ, ಕಾಡಿನಂಥ ಪ್ರದೇಶದಲ್ಲಿ ಅದು ಬೀಳುತ್ತದೆ. ಹಾಗಾಗಿ ಕರಿಬಸವೇಶ್ವರ ಬೇಕರಿ ಮಾಲೀಕರದ್ದು ದುರಾದೃಷ್ಟವಲ್ಲದೆ ಮತ್ತೇನೂ ಅಲ್ಲ.

TV9 Kannada


Leave a Reply

Your email address will not be published.