ದಾವಣಗೆರೆ: ಕೊರೊನಾ ಎರಡನೇ ಅಲೆಯಲ್ಲಿ ಹಳ್ಳಿ ಹಳ್ಳಿಗೂ ಸೋಂಕು ಹಬ್ಬುತ್ತಿದೆ. ಈ ಹಿನ್ನೆಲೆ ಕೊರೊನಾ ಕೊಂಡಿ ಕಳಚಲು ದಾವಣಗೆರೆ ಜಿಲ್ಲಾಧಿಕಾರಿ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕೋವಿಡ್ ಕೆಲಸ ಮಾಡುವ ವೈದ್ಯರು ಬಿಟ್ಟು, ಉಳಿದ ವೈದ್ಯರು ಹಳ್ಳಿ ಸೇವೆ ಮಾಡಲು, ಹಳ್ಳಿಗಳನ್ನು ದತ್ತು ಪಡೆಯಲು ದಾವಣಗೆರೆ ವೈದ್ಯರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದ್ದಾರೆ. ಡಾಕ್ಟರ್ಸ್ ಹಳ್ಳಿಯನ್ನು ದತ್ತು ಪಡೆದು ಜಾಗೃತಿ ಮೂಡಿಸುವುದರ ಜೊತೆಗೆ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ದಾವಣಗೆರೆ ಒಟ್ಟು194 ಗ್ರಾಮ ಪಂಚಾಯ್ತಿಗಳನ್ನು ಹೊಂದಿರುವ ಜಿಲ್ಲೆ. ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ತಂಡ ರಚನೆ ಮಾಡಲಾಗುತ್ತದೆ ಎಂದು ಮಹಾಂತೇಶ್​ ಬೀಳಗಿ ಮಾಹಿತಿ ನೀಡಿದ್ದಾರೆ.

The post ದಾವಣಗೆರೆ ಡಿ.ಸಿ ವಿನೂತನ ಪ್ರಯೋಗ, ಹಳ್ಳಿಗಳನ್ನ ದತ್ತು ಪಡೆಯಲು ವೈದ್ಯರಿಗೆ ಕರೆ appeared first on News First Kannada.

Source: newsfirstlive.com

Source link