ದಾವಣಗೆರೆ: ಪುನೀತ್ ರಾಜ್​ಕುಮಾರ್​ಗೆ ಸಂಗೀತದ ಮೂಲಕ ನುಡಿನಮನ ಸಲ್ಲಿಸಿದ ರಾಜೇಶ್ ಕೃಷ್ಣನ್ | Puneeth Rajkumar nudi namana program held till late at night in Davanagere


ದಾವಣಗೆರೆ: ಪುನೀತ್ ರಾಜ್​ಕುಮಾರ್​ಗೆ ಸಂಗೀತದ ಮೂಲಕ ನುಡಿನಮನ ಸಲ್ಲಿಸಿದ ರಾಜೇಶ್ ಕೃಷ್ಣನ್

ಸಂಗೀತದ ಮೂಲಕ ಗಾಯಕ ರಾಜೇಶ್ ಕೃಷ್ಣನ್ ಅಪ್ಪುಗೆ ನುಡಿನಮನ ಸಲ್ಲಿಸಿದರು

ದಾವಣಗೆರೆ: ಪುನೀತ್ ರಾಜ್​ಕುಮಾರ್​ಗೆ (Puneeth Rajkumar) ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊನ್ನಾಳಿ ಪಟ್ಟಣದಲ್ಲಿ ನಿನ್ನೆ (ನವೆಂಬರ್ 8) ತಡರಾತ್ರಿ ವರೆಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಮ್ಮ ಮಧುರ ಸಂಗೀತದ ಮೂಲಕ ಗಾಯಕ ರಾಜೇಶ್ ಕೃಷ್ಣನ್, ಅಪ್ಪುಗೆ ನುಡಿನಮನ ಸಲ್ಲಿಸಿದರು. ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪುನೀತ್ ನುಡಿನಮನ‌ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಕುಟುಂಬದ 62 ಜನರು ನೇತ್ರದಾನಕ್ಕೆ‌ ನಿರ್ಧಾರ ಮಾಡಿದರು. ಜತೆಗೆ ಶಾಸಕರಿಗೆ ಅವಳಿ ತಾಲೂಕಿನ 500 ಜನರು‌ ಸಾಥ್ ನೀಡಿದ್ದು, ನೇತ್ರದಾನಕ್ಕೆ ಕೈಜೋಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅವಳಿ ತಾಲೂಕಿನಲ್ಲಿ ಐದು ಸಾವಿರ ಜನರು ನೇತ್ರಾದಾನ ಮಾಡಿಸಲು ಸಚಿವ‌ ರೇಣುಕಾಚಾರ್ಯರು ಸಂಕಲ್ಪ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದಿಂದ ಪ್ರೇರಣೆಗೊಂಡ‌ ರೇಣುಕಾಚಾರ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:
ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಪೂಜೆ ಸಲ್ಲಿಸಿ, ಗಳಗಳನೆ ಅತ್ತ ಕಾಲಿವುಡ್​ ನಟ ಸಿದ್ದಾರ್ಥ್​

ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ, ತಮ್ಮ ಪುನೀತ್​ನನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ರಾಘಣ್ಣ

 

TV9 Kannada


Leave a Reply

Your email address will not be published.