ದಾವಣಗೆರೆ: ಲಾಕ್​ಅಪ್ ಡೆತ್ ಪ್ರಕರಣಕ್ಕೆ ಹೊಸ ತಿರುವು; ತನಿಖೆಯನ್ನು ಸಿಐಡಿಗೆ ವಹಿಸಿದ ಪೊಲೀಸರು | Lockup Death Case in Davanagere CID to continue Probe details here


ದಾವಣಗೆರೆ: ಲಾಕ್​ಅಪ್ ಡೆತ್ ಪ್ರಕರಣಕ್ಕೆ ಹೊಸ ತಿರುವು; ತನಿಖೆಯನ್ನು ಸಿಐಡಿಗೆ ವಹಿಸಿದ ಪೊಲೀಸರು

ಸಾಂಕೇತಿಕ ಚಿತ್ರ

ದಾವಣಗೆರೆ: ಇಲ್ಲಿ ಸಿಇಎನ್ ಠಾಣೆ ಪೊಲೀಸರ ವಶದಲ್ಲಿದ್ದ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಹೊಸ ತಿರುವು ಲಭಿಸಿದೆ. ಲಾಕ್ ಅಪ್ ಡೆತ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿಯ ಬಹದ್ದೂರಘಟ್ಟ ಗ್ರಾಮದ ಕುಮಾರ (34) ಡಿಸೆಂಬರ್ 5ರಂದು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಹತ್ತಾರು ಅನುಮಾನಗಳಿವೆ. ಸೂಕ್ತ ತನಿಖೆಗೆ ಆಗಲಿ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಆಗ್ರಹ ವ್ಯಕ್ತಪಡಿಸಿದೆ. ಈ ಸಂಬಂಧ, ವಕೀಲರಿಂದ ಪ್ರತಿಭಟನೆ ನಡೆಸಿ ಎಸ್​ಪಿಗೆ ದೂರು ನೀಡಲಾಗಿದೆ. ಲಾಕ್ ಅಪ್ ಡೆತ್ ಪ್ರಕರಣ ಬುಕ್ ಮಾಡಲಾಗಿದ್ದು, ದಾವಣಗೆರೆ ಪೊಲೀಸರು ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ.

ವಿಚಾರಣೆ ಹೆಸರಿನಲ್ಲಿ ಆರೋಪಿಯನ್ನ ಪೊಲೀಸ್ ಠಾಣೆ ಬದಲು ಲಾಡ್ಜ್​ಗೆ ಕರೆದುಕೊಂಡು ಹೋಗಿ ಹಿಂಸೆ ನೀಡಿದ್ದಾರೆ. ಆರೋಪಿಗೆ ಹಿಂಸೆ ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆ. ಶಿಕ್ಷೆ ಕೊಡಲು ನ್ಯಾಯಾಲಯಗಳಿವೆ. ಇದನ್ನು ಬಿಟ್ಟು ಹಿಂಸೆ ನೀಡಿದ್ದು ತಪ್ಪು ಎಂದು ವಕೀಲರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಲಾಕ್ ಅಪ್ ಡೆತ್ ಪ್ರಕರಣ ಮುಚ್ಚಿ ಹಾಕಲು ಪೊಲೀಸರಿಂದ ಸೊಮೊಟೊ ದೂರು ದಾಖಲು ಮಾಡಲಾಗಿದೆ ಎಂದು ದಾವಣಗೆರೆಯಲ್ಲಿ ಕರ್ನಾಟಕ ನವ ನಿರ್ಮಾಣ ಸಮಿತಿ ಹಾಗೂ ಭಾರತೀಯ ದಲಿತ ಸಂಘರ್ಷ ಸಮಿತಿ ಆರೋಪ ಮಾಡಿದೆ. ಘಟನೆ ನಡೆದ ದಿನ ಮೌಖಿಕ ದೂರು‌ ನೀಡುವುದಾಗಿ ಹೇಳಿದ್ದೆವು. ಲಿಖಿತ ದೂರು ನೀಡಲು ಪೊಲೀಸರು ಹೇಳಿದ್ದರು. ಆದರೆ ತಡ ರಾತ್ರಿ ತಮಗೆ ಬೇಕಾದಂತೆ ಬರೆದುಕೊಂಡು ಮೃತ ವ್ಯಕ್ತಿಯ ಪತ್ನಿ ಕಡೆಯಿಂದ ಪೊಲೀಸರು ಸಹಿ ಹಾಕಿಸಿಕೊಂಡಿದ್ದಾರೆ.

ನಾವು ಕೇವಲ ಸಂಘಟನೆ ಸದಸ್ಯರಲ್ಲ ಮೃತನ ಸಂಬಂಧಿಕರು ಹೌದು. ಈ ಪ್ರಕರಣ ಮುಚ್ಚಿ ಹಾಕಲು ಸೊಮೊಟೊ ಕೇಸ್ ಮಾಡಲಾಗಿದೆ. ಒಟ್ಟು ಎಂಟು ಜನ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹ ವ್ಯಕ್ತಪಡಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *