ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, VVS ಲಕ್ಷ್ಮಣ್.. 2000ದ ಕಾಲಘಟ್ಟದಲ್ಲಿ ಟೀಮ್ ಇಂಡಿಯಾದ ಸೆನ್ಸೇಷನ್ಸ್. ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ ನಾಯಕ ದಾದಾ, ಫಿಕ್ಸಿಂಗ್ ಭೂತದಿಂದ ತಂಡವನ್ನ ಹೊರಕ್ಕೆ ತಂದ ಗ್ರೇಟ್ ಲೀಡರ್. ಇತ್ತ, ಎಂಥ ಸಂಕಷ್ಟಕ್ಕೆ ಸಿಲುಕಿದ್ರೂ, ತಂಡವನ್ನ ಸೋಲಿನಿಂದ ಪಾರು ಮಾಡುತ್ತಿದ್ದದ್ದು ಆಪತ್ಭಾಂದವ ಜೋಡಿ ದ್ರಾವಿಡ್-ಲಕ್ಷ್ಮಣ್. ಈ ಮೂವರು ಮಹನೀಯರು ಟೀಮ್ ಇಂಡಿಯಾಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಇದೀಗ ಮತ್ತೆ ಈ ದಿಗ್ಗಜರು ಒಟ್ಟಾಗಿ ಟೀಮ್ ಇಂಡಿಯಾಗೆ ಸೇವೆ ಸಲ್ಲಿಸಲಿದ್ದಾರೆ.
ವಿಶ್ವಶ್ರೇಷ್ಠ ಆಟಗಾರರನ್ನ ಬೆಳೆಸಿದ ಮಹಾರಾಜ, ಸೌರವ್ ಗಂಗೂಲಿ ಪ್ರಸ್ತುತ ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಅಧ್ಯಕ್ಷ. ಅತ್ತ ಭಾರತ ತಂಡದ ಹೆಡ್ಕೋಚ್ ದಿ ವಾಲ್. ಇದೀಗ NCA ಮುಖ್ಯಸ್ಥರಾಗಿ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ VVS ಲಕ್ಷ್ಮಣ್ ಕೂಡ ಎಂಟ್ರಿ ಕೊಟ್ಟಿದ್ದು, ದಿಗ್ಗಜರ ಸಮಾಗಮ ಭಾರತೀಯ ಕ್ರಿಕೆಟ್ನಲ್ಲಿ ಹೊಸ ನಿರೀಕ್ಷೆಯನ್ನೇ ಹುಟ್ಟುಹಾಕಿದೆ. ಆದರೆ ಈ ತ್ರಿಮೂರ್ತಿಗಳು ಸೇವೆ ಸಲ್ಲಿಸೋದು ಮೈದಾನದಲ್ಲಿ ಅಲ್ಲ, ಬದಲಾಗಿ ಆಫ್ ದ ಫೀಲ್ಡ್ನಲ್ಲಿ.
ಇದನ್ನೂ ಓದಿ: 2024ರ ಐಸಿಸಿ ‘ಟಿ20 ವಿಶ್ವಕಪ್’ ಟೂರ್ನಿ ಆತಿಥ್ಯ ವಹಿಸುವ ದೇಶ ಯಾವುದು ಗೊತ್ತಾ..?
ಪ್ರತಿ ಕೆಲಸಕ್ಕೆ ವೃತ್ತಿಪರ ಚಿಂತನೆ, ತಾರ್ಕಿಕ ಆಲೋಚನೆಗಳ ವಾಸ್ತವಿಕ ಗುರಿ, ಪೂರಕ ಹೊಂದಾಣಿಕೆ, ಸುಧಾರಣೆ ಪ್ರಯತ್ನಶೀಲತೆ, ನಿರಂತರ ಪ್ರಕ್ರಿಯೆ ಮೂಲಕ ಗುರಿ ಮುಟ್ಟುವುದು ಈ ತ್ರಿಮೂರ್ತಿಗಳ ಸ್ಟೈಲ್. ರಾಹುಲ್, ಗಂಗೂಲಿ ಈಗಾಗಲೇ ನಿರೂಪಿಸಿದರೆ, ಲಕ್ಷ್ಮಣ್ ಗಮ್ಯದತ್ತ ಈಗ ಹೆಜ್ಜೆ ಹಾಕಲಿದ್ದಾರೆ. ಪ್ರತಿಭೆಗಳನ್ನ ಸೃಷ್ಟಿಸುವ ಕೇಂದ್ರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್ ಹೆಸರು ಶೀಘ್ರವೇ ಅಧಿಕೃತಗೊಳ್ಳಲಿದ್ದು, ಸವಾಲುಗಳ ಬೆಟ್ಟ ಎದುರಿಸೋಕೆ ಸನ್ನದ್ಧರಾಗಿದ್ದಾರೆ.
ಮುಂದಿನ 2 ವರ್ಷಗಳಲ್ಲಿ ಭಾರತಕ್ಕಿದೆ ಬೆಟ್ಟದಷ್ಟು ಸವಾಲು
ಮುಂದಿನ 2 ವರ್ಷಗಳಲ್ಲಿ ಐಸಿಸಿಯ T20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಳಿವೆ. ಜೊತೆಗೆ ಏಷ್ಯಾಕಪ್, ಪ್ರತಿಷ್ಠಿತ ಸರಣಿಗಳಿವೆ. ಹಾಗಾಗಿ ಟೀಮ್ ಇಂಡಿಯಾ ದೊಡ್ಡಮಟ್ಟದ ಕಸರತ್ತನ್ನೇ ನಡೆಸಬೇಕು. ಅದಕ್ಕೆ ಮೂವರು ಸಾಕಷ್ಟು ಯೋಜನೆಗಳನ್ನ ರೂಪಿಸುವಲ್ಲಿ ನಿರತರಾಗಿದ್ದಾರೆ. ಮುಂದಿನ ಟೂರ್ನಿಗಳಿಗಾಗಿ ಡಿಫ್ರೆಂಟ್ ಗೇಮ್ ಪ್ಲಾನ್, ಬ್ಲೂ ಪ್ರಿಂಟ್ ಕೂಡ ಸಿದ್ಧಪಡಿಸ್ತಿದ್ದಾರೆ.
ಸದ್ಯ ತ್ರಿಮೂರ್ತಿಗಳು ಕ್ರಿಕೆಟ್ ಲೋಕದಲ್ಲಿ ಮತ್ತೆ ಒಂದಾಗಿ ಸೇವೆ ಸಲ್ಲಿಸೋಕೆ ಸಿದ್ಧರಾಗಿರೋದು ವಿಶ್ವ ಕ್ರಿಕೆಟ್ ಸಂಸ್ಥೆಗಳಿಗೆ ನಡುಕ ಶುರುವಾಗಿದೆ. ಒಟ್ಟಿನಲ್ಲಿ ದ್ರಾವಿಡ್-ಲಕ್ಷ್ಮಣ್ ಜೊತೆಯಾಟ ಮತ್ತು ಅದ್ಭುತ ನಾಯಕತ್ವದಿಂದ ಗಂಗೂಲಿ ಟೀಮ್ ಇಂಡಿಯಾವನ್ನ ಅಂದು ಗೆಲ್ಲಿಸಿದಂತೆ, ಮುಂದೆಯೂ ಭಾರತವನ್ನ ಗೆಲ್ಲಿಸಿಕೊಟ್ಟು ಮತ್ತೊಂದು ಮಜಲಿಗೆ ಕೊಂಡೊಯ್ಯಲಿ ಅನ್ನೋದೇ ನಮ್ಮೆಲ್ಲರ ಆಶಯ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಭರ್ಜರಿ ಜಯ; ಆಸ್ಟ್ರೇಲಿಯಾ ಮಡಿಲಿಗೆ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ
ಇದನ್ನೂ ಓದಿ: ರನ್ನರ್ಅಪ್ಗೆ ತೃಪ್ತಿಪಟ್ಟ ವಿಲಿಯಮ್ಸನ್.. ‘ಚಾಂಪಿಯನ್ ನಗು’ ಬೀರಿದ ಆಸ್ಟ್ರೇಲಿಯಾದ ‘ಬೊಂಬಾಟ ಆಟ’ ಹೇಗಿತ್ತು..?