ಬೆಳಗ್ಗಿನ ಉಪಹಾರಕ್ಕೆ ಬಿಸಿ ಬಿಸಿಯಾದ ದೋಸೆ ಇದ್ದರೆ ಚೆನ್ನಾಗಿರುತ್ತದೆ. ದೋಸೆಯನ್ನು ಇಷ್ಟ ಪಟ್ಟು ನಾಲಿಗೆ ಚಪ್ಪರಿಸಿ ತಿನ್ನುವವರು ಹೆಚ್ಚಿನವರಿದ್ದಾರೆ. ಹೀಗಾಗಿ ಇಂದಿನ ಬೆಳಗ್ಗಿನ ಉಪಹಾರಕ್ಕೆ ನೀವು ಮನೆಯಲ್ಲಿಯೇ ಮಾಡಿ ರುಚಿಯಾದ ದೋಸೆ…

ಬೇಕಾಗುವ ಸಾಮಗ್ರಿಗಳು:

* ಹೆಸರುಬೇಳೆ – 1 ಕಪ್
* ಉದ್ದಿನಬೇಳೆ – 1 ಕಪ್
* ಕಡಲೆಬೇಳೆ- 1 ಕಪ್
* ತೊಗರಿಬೇಳೆ – 1 ಕಪ್
* ಅಕ್ಕಿ- 1 ಕಪ್
* ಜೀರಿಗೆ- 1 ಟೀ ಸ್ಪೂನ್
* ಒಣಗಿದ ಮೆಣಸಿನ ಕಾಯಿ -4-5
* ಕೊತ್ತಂಬರಿ
* ಅಡುಗೆ ಸೋಡ


ಮಾಡುವ ವಿಧಾನ:

* ಹೆಸರುಬೇಳೆ, ಉದ್ದಿನಬೇಳೆ, ಕಡಲೆಬೇಳೆ, ತೊಗರಿಬೇಳೆ, ಅಕ್ಕಿ, ಜೀರಿಗೆ, ಒಣಗಿದ ಮೆಣಸಿನ ಕಾಯಿ ಎಲ್ಲವನ್ನೂ 1 ಗಂಟೆ ಕಾಲ ನೆನೆಸಿಟ್ಟುಕೊಳ್ಳಬೇಕು.


* ನಂತರ ನೆನೆಸಿದ ಬೇಳೆ, ಅಕ್ಕಿ ಎಲ್ಲವನ್ನೂ ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಕೊಳ್ಳಬೇಕು.

* ನಂತರ ರುಬ್ಬಿಕೊಂಡ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಡುಗೆ ಸೋಡವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

* ನಂತರ ಒಲೆಯ ಮೇಲೆ ತವಾ ಇಟ್ಟು ಕಾದ ನಂತರ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಬೇಯಿಸಿದರೆ ರುಚಿಕರವಾದ ಬೇಳೆ ದೋಸೆ ಸವಿಯಲು ಸಿದ್ಧವಾಗುತ್ತದೆ.

The post ದಿಢೀರ್ ಆಗಿ ಮಾಡಿ ಬೇಳೆ ದೋಸೆ appeared first on Public TV.

Source: publictv.in

Source link