ಬೇಕಾಗುವ ಪದಾರ್ಥಗಳು…

  • ಅಕ್ಕಿ- 1.5 ಬಟ್ಟಲು
  • ಉದ್ದಿನ ಬೇಳೆ-ಅರ್ಧ ಬಟ್ಟಲು
  • ತೊಗರಿಬೇಳೆ-2 ಚಮಚ
  • ಕಡಲೆಬೇಳೆ-2 ಚಮಚ
  • ಮೆಂತ್ಯೆ- 1/4 ಚಮಚ
  • ಅವಲಕ್ಕಿ- 1 ಬಟ್ಟಲು
  • ರವೆ- 2 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಬೇಕಿಂಗ್ ಸೋಡಾ- ಅರ್ಧ ಚಮಚ

ಮಾಡುವ ವಿಧಾನ…

  • ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಅಕ್ಕಿಯನ್ನು ಹಾಕಿ ಹುರಿಯಬೇಕು. ಅಕ್ಕಿಯಲ್ಲಿ ನೀರಿನ ಅಂಶ ಹೋಗುವವರೆಗೆ ಸ್ವಲ್ಪ ಪ್ರಮಾಣದಲ್ಲಿ ಹುರಿದು, ನಂತರ ಅಕ್ಕಿ ಸಂಪೂರ್ಣವಾಗಿ ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಬೇಕು.
  • ಇದೇ ಬಾಣಲೆಗೆ ಉದ್ದಿನ ಬೇಳೆ, ತೊಗರಿಬೇಳೆ, ಕಡಲೆಬೇಳೆ, ಮೆಂತ್ಯೆ, ಅವಲಕ್ಕಿ ಎಲ್ಲವನ್ನೂ ಹಾಕಿ ಹುರಿದುಕೊಳ್ಳಬೇಕು. ತಣ್ಣಗಾದ ಬಳಿಕ ಪುಡಿ ಮಾಡಿಕೊಳ್ಳಬೇಕು. 
  • ನಂತರ ಈಗಾಗಲೇ ಪುಡಿ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟಿಗೆ ಈ ಬೇಳೆಯ ಪುಡಿಯನ್ನೂ ಹಾಕಿ, ರವೆ, ಉಪ್ಪು, ಹಾಗೂ ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು. 
  • ನಂತರ ಅಗತ್ಯವಿದ್ದಷ್ಟು ನೀರು ಹಾಕಿಕೊಂಡು ಹಿಟ್ಟು ತಯಾರಿಸಿಕೊಂಡು ಒಲೆಯ ಮೇಲೆ ಕಾವಲಿ ಇಟ್ಟು ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಹಾಕಿ ಅಂಚುಗಳಿಗೆ ಹರಡಿಸಿ ಎರಡೂ ಬದಿಯಲ್ಲೂ ಬೇಯಿಸಿದರೆ, ರುಚಿಕರವಾದ ದಿಢೀರ್ ದೋಸೆ ಸವಿಯಲು ಸಿದ್ಧ. 

Kannadaprabha – ಆಹಾರ-ವಿಹಾರ – https://www.kannadaprabha.com/food/
Read More