ದಿನಕ್ಕೆ 6 ಬಾರಿ ಊಟ.. ವಿಶ್ವದ ಬಲಿಷ್ಠ ವ್ಯಕ್ತಿಯ ಸಿಕ್ರೆಟ್​ ಬಿಚ್ಚಿಟ್ಟ ಹೆಂಡತಿ..!


ಬಾಡಿ ಬಿಲ್ಡರ್​ ಅಂದ್ರೆ ತಟ್ಟನೆ ನೆನಪಾಗೋದು ಅವರ ಅನುಸರಿಸುವ ಊಟದ ಪದ್ಧತಿ. ಯಾಕಂದ್ರೆ ಬಾಡಿ ಬಿಲ್ಡರ್​ಗಳ ಕಟ್ಟುಮಸ್ತಿನ ದೇಹ ನೋಡ್ತಿದ್ದರೆ ಅದನ್ನು ಪೋಷಿಸಲು ಅವರು ಅನುಸರಿಸುವ ಊಟದ ಪದ್ಧತಿಯ ಕುರಿತು ಜನರಿಗೆ ಸಹಜವಾಗಿ ಆಸಕ್ತಿ ಇದ್ದೇ ಇರುತ್ತದೆ.

ಸದ್ಯ ಬ್ರಿಟಿಷ್​ ಬಾಡಿ ಬಿಲ್ಡರ್​ ಒಬ್ಬರು ತಮ್ಮ ಊಟದ ವಿಚಾರವಾಗಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಿದ್ದಾರೆ. ಇವರು ಪ್ರತಿನಿತ್ಯ ಬರೋಬ್ಬರಿ 7000 ಕೆಜಿ ಕ್ಯಾಲೋರಿ ಹೊಂದಿರುವ ಊಟವನ್ನು ಸೇವಿಸುತ್ತಿದ್ದಾರೆ ಅಂದ್ರೆ ನೀವು ಅರೆ ಕ್ಷಣ ಶಾಕ್​ ಆಗೋದು ಫಿಕ್ಸ್​! ಈ ವಿಚಾರವನ್ನು ಖುದ್ದು ಅವರೇ ಹಂಚಿಕೊಂಡಿದ್ದು ಉತ್ತಮ ದೇಹದಾರ್ಢ್ಯವನ್ನು ಹೊಂದಲು ಇದು ನನಗೆ ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.

‘ದಿ ಬೀಸ್ಟ್’ ಎಂದೇ ಖ್ಯಾತಿಗಳಿಸಿರುವ ಅಮೆರಿಕಾ ಮೂಲದ ಎಡ್ವರ್ಡ್​ ಸ್ಟಿಫನ್ ಹಾಲ್​ 2017ರಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ವಿಶ್ವದ ಬಲಿಷ್ಠ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಿದ್ದರು. ​ಇವರು ‘ಎಡ್ಡಿ’ ಎಂಬ ಹೆಸರಿನಿಂದಲೇ ಜನಾನುರಾಗಿದ್ದಾರೆ. ತಮ್ಮದೇ ಯೂಟ್ಯೂಬ್​ ಚಾನೆಲ್​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ಇವರು ಸದ್ಯ ತಮ್ಮ ಊಟದ ಸಿಕ್ರೇಟ್ ರಿವಿಲ್​ ಮಾಡಿದ್ದು ದಿನಕ್ಕೆ 6 ಬಾರಿ ಊಟ ಮಾಡಿ 7000 ಕೆಜಿ ಕ್ಯಾಲೋರಿಯನ್ನ ಸಂಪಾದಿಸ್ತೇನೆ ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಗಂಡನಿಗೆ ಬೆಂಬಲವಾಗಿ ನಿಂತ ಪತ್ನಿ
ಎಡ್ವರ್ಡ್​ ದಿನವೊಂದಕ್ಕೆ ಬರೋಬ್ಬರಿ 7000 ಕ್ಯಾಲೋರಿ ಇರುವ ಆಹಾರವನ್ನು ಸೇವಿಸ್ತಾರಂತೆ. ಅಷ್ಟೊಂದು ಕ್ಯಾಲೋರಿ ಇರುವ ಆಹಾರವನ್ನು ತಯಾರಿಸೋದು ಕೂಡ ಇವರ ಧರ್ಮಪತ್ನಿ ಅಲೆಕ್ಸಾಂಡ್ರಾ ಹಾಲ್​. ಪತಿಯ ಪ್ರತಿ ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತಿರುವ ಅಲೆಕ್ಸಾಂಡ್ರಾ ನಿತ್ಯ 6 ಬಾರಿ ಸಾಕಷ್ಟು ಕ್ಯಾಲೋರಿ ಇರುವ ಖಾದ್ಯಗಳನ್ನು ತಯಾರಿಸುತ್ತಾರೆ.

News First Live Kannada


Leave a Reply

Your email address will not be published. Required fields are marked *