ಕೊರೆನಾ ಎರಡನೇ ಅಲೆಯ ಅಬ್ಬರಕ್ಕೆ ಹಲವು ರಾಜ್ಯಗಳಲ್ಲಿ ಲಾಕ್​ಡೌನ್​ ಹೇರಲಾಗಿದೆ. ಕರ್ನಾಟಕದಲ್ಲೂ ಜೂನ್​ 7ರವರೆಗೂ ಲಾಕ್​ಡೌನ್​ ಹೇರಲಾಗಿದ್ದು, ಜನರು ಕೆಲಸ ಇಲ್ಲದೇ ದಿನಸಿಗೂ ಕಷ್ಟ ಪಡುವಂತ ಸ್ಥಿತಿ ಬಂದೊದಗಿದೆ. ಇದೀಗ ಸ್ಯಾಂಡಲ್​ವುಡ್​ ನಟರು, ಫಿಲ್ಮ್​ ಚೇಂಬರ್​ ಸದಸ್ಯರು ಕಲಾವಿದರಿಗೆ ನೆರವಾಗ್ತಿದ್ದು, ದಿನಸಿ ಕಿಟ್​ಗಳನ್ನ ವಿತರಿಸುತ್ತಿದ್ದಾರೆ. ಸದ್ಯ ನಟ ಉಪೇಂದ್ರ ಕೂಡ ಕಲಾವಿದರ ಮನೆಗೆ ದಿನಸಿ ಕಿಟ್​ಗಳನ್ನ ನೀಡುತ್ತಿದ್ದು, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಇದೀಗ ಹಿರಿಯ ನಟ ಉಮೇಶ್​, ಉಪೇಂದ್ರ ಕಲಾವಿದರ ನೆರವಿಗೆ ಬಂದಿರೋದನ್ನ ಶ್ಲಾಘಿಸಿದ್ದು ಧನ್ಯವಾದ ತಿಳಿಸಿದ್ದಾರೆ. ನಟ ಉಮೇಶ್​ ಮನೆಗೂ ನಟ ಉಪೇಂದ್ರ ದಿನಸಿ ಕಿಟ್​​ ಕಳಿಸಿ ಕೊಟ್ಟಿದ್ದಾರೆ.

ನಮಸ್ಕಾರ ಉಪೇಂದ್ರ ಅವರಿಗೆ, ನಿಮ್ಮ ಸಮಾಜಮುಖಿ ಕಾರ್ಯಕ್ರಮ ಟಿವಿಯಲ್ಲಿ ನೋಡ್ತಾ ಇದ್ದೀವಿ. ಇವತ್ತು ಅದನ್ನ ನೇರವಾಗಿ ನೋಡಿದ್ವಿ. ನೀವು ಕಲಾವಿದರ ಬಗ್ಗೆ, ಸಹ ಕಲಾವಿದರ ಬಗ್ಗೆ ಅಭಿಮಾನದಿಂದ ನಮ್ಮ ಮನೆಗೆ ದಿನಸಿ ಕಿಟ್​ ಕಳಿಸಿದ್ದೀರಿ. ಅದಕ್ಕೋಸ್ಕರ ನಿಮಗೂ ನಿಮ್ಮ ಕುಟುಂಬಕ್ಕೂ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಭಗವಂತ ನಿಮಗೆ ಒಳ್ಳೆಯದು ಮಾಡಲಿ. ನೀವು ಕಳಿಸಿರೋ ಕಿಟ್​​ನ ನಮ್ಮ ಮನೆಗೆ ತಲುಪಿಸಿದ್ದಾರೆ. ನಿಮಗೆ ಒಳ್ಳೆಯದಾಗಲಿ.

ಉಮೇಶ್​, ಹಿರಿಯ ನಟ

ಉಪೇಂದ್ರರನ್ನ ಹೊರತುಪಡಿಸಿ, ನಟ ಕಿಚ್ಚ ಸುದೀಪ್​ ಕೂಡ ತಮ್ಮ ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ ಮೂಲಕ ಹಿರಿಯ ಕಲಾವಿದರ, ಫೋಷಕ ಕಲಾವಿದರ ನೆರವಿಗೆ ನಿಂತಿದ್ದಾರೆ. ಸ್ಯಾಂಡಲ್​ವುಡ್​​ ನಟರು ಮಾಡ್ತಿರುವ ಸೇವೆಗೆ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದು ಮನದುಂಬಿ ಹರಸುತ್ತಿದ್ದಾರೆ.

The post ದಿನಸಿ ಕಿಟ್​ ವಿತರಣೆ; ಉಪೇಂದ್ರ ನೆರವಿಗೆ ಧನ್ಯವಾದ ತಿಳಿಸಿದ ಹಿರಿಯ ನಟ ಉಮೇಶ್ appeared first on News First Kannada.

Source: newsfirstlive.com

Source link