ರಾಹುಕಾಲ – 12:21 ರಿಂದ 1:57
ಗುಳಿಕಕಾಲ – 10:45 ರಿಂದ 12:21
ಯಮಗಂಡಕಾಲ – 7:33 ರಿಂದ 9:09

ಬುಧವಾರ, ಅಷ್ಟಮಿ, ಶತಬಿಷ ನಕ್ಷತ್ರ, ವಿಷ್ಕಂಭ ಯೋಗ, ಬಾಲ ಕರಣ
ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ,ಕೃಷ್ಣ ಪಕ್ಷ,

ಮೇಷ: ಧನಲಾಭ, ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷ ನೆಮ್ಮದಿ, ನಿಮ್ಮ ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ.

ವೃಷಭ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ಮನಶಾಂತಿ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ.

ಮಿಥುನ: ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ವಿವಿಧ ಮೂಲಗಳಿಂದ ಹಣಕಾಸು ಒದಗಿಬರಲಿದೆ.

ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಾತನಾಡುವಾಗ ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಕಡೆ ಗಮನ ಹರಿಸಿ.

ಸಿಂಹ: ಕುಟುಂಬ ಸೌಖ್ಯ, ದ್ರವ್ಯಲಾಭ, ಶತ್ರು ನಾಶ, ಪ್ರಯಾಣದಿಂದ ತೊಂದರೆ, ಮನೋವ್ಯಥೆ, ರೋಗಬಾಧೆ.

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ಕೈಗೆ ಬಂದ ಸಂಪಾದನೆ ಇತರರಿಗೆ ಸಹಾಯವಾಗಲೆಂದು ದಾನ ಮಾಡುವಿರಿ.

ತುಲಾ: ಮನಸ್ಸಿಗೆ ನೆಮ್ಮದಿ, ಅಕಾಲ ಭೋಜನ ಪ್ರಾಪ್ತಿ, ಹಣಕಾಸು ಸಮಸ್ಯೆ, ಬಂಧು-ಮಿತ್ರರ ಸಹಕಾರ.

ವೃಶ್ಚಿಕ: ಮಕ್ಕಳಿಂದ ನಿಂದನೆ, ದೈನಂದಿನ ನೆಮ್ಮದಿಗೆ ಭಂಗ, ಋಣಭಾದೆ, ಪ್ರಯಾಣದಲ್ಲಿ ತೊಂದರೆ, ವಾಹನ ಚಲನೆಯಲ್ಲಿ ಎಚ್ಚರ.

ಧನಸು: ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ, ಬಾಕಿ ಹಣ ವಸೂಲಿ, ಗಣ್ಯ ವ್ಯಕ್ತಿಗಳ ಭೇಟಿ.

ಮಕರ: ಕುಟುಂಬದಲ್ಲಿ ವೈಮನಸ್ಸು, ಶುಭಕಾರ್ಯಕ್ಕೆ ಬಂಧುಗಳ ಸಹಾಯ, ಕೆಲಸಕಾರ್ಯಗಳಲ್ಲಿ ನಿರ್ವಿಘ್ನ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ

ಕುಂಭ: ಅಮೂಲ್ಯ ವಸ್ತುಗಳ ಖರೀದಿ, ವ್ಯಾಪಾರಿಗಳಿಗೆ ಲಾಭ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಇಷ್ಟಾರ್ಥಸಿದ್ಧಿ.

ಮೀನ: ಸರ್ಕಾರಿ ನೌಕರರಿಗೆ ಸಮಸ್ಯೆ, ಉದ್ಯೋಗದಲ್ಲಿ ಕಿರಿ-ಕಿರಿ, ವಿದ್ಯಾರ್ಥಿಗಳಿಗೆ ಶುಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.

 

The post ದಿನ ಭವಿಷ್ಯ 02-06-2021 appeared first on Public TV.

Source: publictv.in

Source link