ದಿನ ಭವಿಷ್ಯ: 13-06-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ.
ವಾರ : ಭಾನುವಾರ,
ತಿಥಿ : ತೃತೀಯ,
ನಕ್ಷತ್ರ : ಪುನರ್ವಸು,
ರಾಹುಕಾಲ: 5.11 ರಿಂದ 6.48
ಗುಳಿಕಕಾಲ: 3.35 ರಿಂದ 5.11
ಯಮಗಂಡಕಾಲ: 12.23 ರಿಂದ 1.59

ಮೇಷ: ಕುಟುಂಬದ ಹೊರೆ ಹೆಚ್ಚಾಗುವುದು, ವಿಪರೀತ ಹಣ ವ್ಯಯ, ಅನಾರೋಗ್ಯ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಅನ್ಯರಲ್ಲಿ ವೈಮನಸ್ಸು, ಸ್ವಯಂಕೃತ ಅಪರಾಧ.

ವೃಷಭ: ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ, ವಿಪರೀತ ಖರ್ಚು, ಮಾತಿನಲ್ಲಿ ಹಿಡಿತವಿರಲಿ, ಅತಿಯಾದ ನಿದ್ರೆ, ಉದ್ಯೋಗದಲ್ಲಿ ಪ್ರಗತಿ, ಮಹಿಳೆಯರಿಗೆ ಲಾಭ.

ಮಿಥುನ: ಪ್ರಿಯ ಜನರ ಭೇಟಿ, ಸ್ತ್ರೀಸೌಖ್ಯ, ಆಂತರಿಕ ಕಲಹ, ಮನೋವ್ಯಥೆ, ಅಶಾಂತಿ, ಉದ್ಯೋಗದಲ್ಲಿ ಪ್ರಗತಿ, ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿ ಕೊಳ್ಳುವಿರಿ, ಪರರ ಧನ ಪ್ರಾಪ್ತಿ.

ಕಟಕ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿಂದ ಕಲಹ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಅಧಿಕ ತಿರುಗಾಟ.

ಸಿಂಹ: ಮಹಿಳೆಯರಿಗೆ ವಿಶೇಷ ಲಾಭ, ವಿಪರೀತ ಖರ್ಚು, ಉದ್ಯೋಗದಲ್ಲಿ ಪ್ರಗತಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ, ಹಿರಿಯರ ಸಹಾಯದಿಂದ ವ್ಯವಹಾರಗಳು ಸುಗಮ.

ಕನ್ಯಾ: ಅಮೂಲ್ಯ ವಸ್ತುಗಳ ಖರೀದಿ, ದಾಂಪತ್ಯದಲ್ಲಿ ಪ್ರೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಆಲಸ್ಯ ಮನೋಭಾವ, ಕೋಪ ಜಾಸ್ತಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಅನಾರೋಗ್ಯ.

ತುಲಾ: ಕೆಲಸ ಕಾರ್ಯಗಳು ಸಕಾಲದಲ್ಲಿ ಆಗುವುದಿಲ್ಲ, ಮನಸ್ಸಿನಲ್ಲಿ ಗೊಂದಲ, ಹಳೆ ಸಾಲ ಮರು ಪಾವತಿಸುವಿರಿ, ಶುಭ ಸುದ್ದಿ ಕೇಳುವಿರಿ, ಮನಶಾಂತಿ, ಶತ್ರು ಭಾದೆ.

ವೃಶ್ಚಿಕ: ಕುಟುಂಬದಲ್ಲಿ ಶಾಂತಿ, ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ, ಆಕಸ್ಮಿಕ ಖರ್ಚು.

ಧನಸು: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ ತೋರುವಿರಿ, ಪಟ್ಟುಬಿಡದೇ ಹಿಡಿದ ಕೆಲಸ ಮಾಡಿಸಿ ಕೊಳ್ಳುವಿರಿ, ದುಷ್ಟರಿಂದ ದೂರವಿರಿ, ಶತ್ರು ಭಾದೆ, ಉದ್ಯೋಗದಲ್ಲಿ ಪ್ರಗತಿ.

ಮಕರ: ಪ್ರೀತಿ ಸಮಾಗಮ, ಅಧಿಕ ಖರ್ಚು, ಮಾತಿನ ಚಕಮುಕಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಭೋಗವಸ್ತು ಪ್ರಾಪ್ತಿ, ಧನಲಾಭ, ಸತ್ಕಾರ್ಯಾಸಕ್ತಿ.

ಕುಂಭ: ವಾಹನ ಖರೀದಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಬಾಕಿ ವಸೂಲಿ, ಧನಲಾಭ, ಯತ್ನ ಕಾರ್ಯಗಳಲ್ಲಿ ಜಯ, ಹಣಕಾಸಿನ ವಿಷಯದಲ್ಲಿ ಎಚ್ಚರ, ಅನಗತ್ಯವಾದ ಖರ್ಚು.

ಮೀನ: ವ್ಯಾಪಾರದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ದೂರ ಪ್ರಯಾಣ, ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತೆ, ಸುಖ ಭೋಜನ, ಮನಶಾಂತಿ.

The post ದಿನ ಭವಿಷ್ಯ: 13-06-2021 appeared first on Public TV.

Source: publictv.in

Source link