ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ,
ನಕ್ಷತ್ರ : ಪುಷ್ಯ ಉಪರಿ ಆಶ್ಲೇಷ, ಯೋಗ: ಶೋಲ,
ವಾರ : ಬುಧವಾರ, ತಿಥಿ : ನವಮಿ,

ರಾಹುಕಾಲ: 12.22 ರಿಂದ 1.56
ಗುಳಿಕಕಾಲ : 10.48 ರಿಂದ 12.22
ಯಮಗಂಡಕಾಲ: 7.41 ರಿಂದ 9.14

ಮೇಷ: ಶೇರು ವ್ಯವಹಾರಗಳಲ್ಲಿ ನಷ್ಟ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸುಖ ಭೋಜನ, ನೀವಾಡುವ ಮಾತಿನಿಂದ ಅನರ್ಥ.

ವೃಷಭ: ದೇವತಾ ಕಾರ್ಯಗಳಲ್ಲಿ ಒಲವು, ಸೈಟ್ ಖರೀದಿಸುವ ಸಾಧ್ಯತೆ, ವಾಹನ ಖರೀದಿ, ಸಾಕುಪ್ರಾಣಿಗಳ ತೊಂದರೆ.

ಮಿಥುನ: ಸ್ತ್ರೀಯರಿಗೆ ನಮ್ಮದಿ, ಕುತಂತ್ರದಿಂದ ಹಣ ಸಂಪಾದನೆ, ಚೋರಭಯ, ಅಧಿಕ ಕೋಪ, ವೃಥಾ ತಿರುಗಾಟ, ಆರೋಗ್ಯದಲ್ಲಿ ಏರುಪೇರು.

ಕಟಕ: ಕೃಷಿಕರಿಗೆ ಲಾಭ, ಅಲ್ಪ ಕಾರ್ಯಸಿದ್ಧಿ, ಪ್ರೀತಿ ಸಮಾಗಮ, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ನೌಕರಿಯಲ್ಲಿ ತೊಂದರೆ.

ಸಿಂಹ: ಪರರಿಂದ ತೊಂದರೆ, ಅತಿಯಾದ ಶರೀರದಲ್ಲಿ ಆಯಾಸ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ಬಾಕಿ ಹಣ ಕೈಸೇರುವುದು.

ಕನ್ಯಾ: ಅನಗತ್ಯ ಖರ್ಚು ಮಾಡುವಿರಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಸ್ತ್ರೀಸೌಖ್ಯ, ಅಪರಿಚಿತರಿಂದ ಕಲಹ.

ತುಲಾ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಆತ್ಮೀಯರ ಭೇಟಿ, ಮಹಿಳೆಯರಿಗೆ ವಿಶೇಷ ಲಾಭ, ದಾನ ಧರ್ಮದಲ್ಲಿ ಆಸಕ್ತಿ.

ವೃಶ್ಚಿಕ: ಪತ್ರ ವ್ಯವಹಾರಗಳಲ್ಲಿ ಲಾಭ, ಪರಸ್ಥಳ ವಾಸ, ಮಾತಿನ ಚಕಮಕಿ, ಸೇವಕರಿಂದ ತೊಂದರೆ, ಹಣಕಾಸು ಅಡಚಣೆ, ಸಲ್ಲದ ಅಪವಾದ.

ಧನಸ್ಸು: ವೈವಾಹಿಕ ಜೀವನದಲ್ಲಿ ನೆಮ್ಮದಿ, ಹಿರಿಯರಿಂದ ಬೋಧನೆ, ಉದ್ಯೋಗದಲ್ಲಿ ಕಿರಿ-ಕಿರಿ, ಹಿತಶತ್ರುಗಳಿಂದ ತೊಂದರೆ.

ಮಕರ: ಅನ್ಯ ಜನರಲ್ಲಿ ವೈಮನಸ್ಸು, ಟ್ರಾವೆಲ್ಸ್ ನವರಿಗೆ ಲಾಭ, ಆತ್ಮೀಯರಲ್ಲಿ ವಿರೋಧ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಕುಂಭ: ದೂರ ಪ್ರಯಾಣ, ಸ್ನೇಹಿತರಿಂದ ಸಹಾಯ, ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಹೆತ್ತವರಲ್ಲಿ ಪ್ರೀತಿ-ವಾತ್ಸಲ್ಯ, ಆಕಸ್ಮಿಕ ಧನಲಾಭ.

ಮೀನ: ಪುಣ್ಯಕ್ಷೇತ್ರ ದರ್ಶನ, ದಾಯಾದಿಗಳ ಕಲಹ, ಮಿತ್ರರಿಂದ ನಂಬಿಕೆದ್ರೋಹ, ಮನಸ್ಸಿಗೆ ನಾನಾರೀತಿಯ ಚಿಂತೆ, ರಾಜ ವಿರೋಧ.

 

The post ದಿನ ಭವಿಷ್ಯ 21-04-2021 appeared first on Public TV.

Source: horoscope – Public TV
Read More