ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ವಾರಾಂತ್ಯಂದಲ್ಲಿ ಸುದೀಪ್ ನೋಡುವುದೇ ಒಂದು ಖುಷಿ. ಆದರೆ ಈ ನಡುವೆ ಸುದೀಪ್ ಅವರು ವಾರಾಂತ್ಯದಲ್ಲಿ ನೀಡುವ ಕಿಚ್ಚನ ಚಪ್ಪಾಳೆಗಾಗಿ ಸ್ಪರ್ಧಿಗಳು ಕಾಯುವುದು ಅಷ್ಟೇ ಸತ್ಯವಾಗಿದೆ. ಈ ವಾರ ಕಿಚ್ಚನ ಚಪ್ಪಾಳೆಗೆ ಸುದೀಪ್ ಹೇಳಿರುವ ಮಾತುಗಳು ತುಂಬಾ ವಿಶೇಷವಾಗಿ ಕಂಡುಬಂತು.

ಕೊನೆ ವಾರ ನಾನು ಕಿಚ್ಚನ ಚಪ್ಪಾಳೆಯನ್ನು ನಾನು ಕೊಟ್ಟಿರಲಿಲ್ಲ. ಒಂದುವಾರದ ಸ್ಪರ್ಧಿ ಹೇಗೆ ಇರುತ್ತಾನೆ ಎಂದು ನೋಡಿಕೊಂಡು ಕಿಚ್ಚನ ಚಪ್ಪಾಳೆಯನ್ನು ಕೊಡುತ್ತೇವೆ. ಆದರೆ ಈ ವಾರ ನಾನು ಬಿಗ್‍ಬಾಸ್ ಪೂರ್ಣ ಜರ್ನಿಯನ್ನು ಆಧರಿಸಿಕೊಡುತ್ತಿದ್ದೇನೆ. ಟಾಸ್ಕ್ ಚೆನ್ನಾಗಿ ಆಡುತ್ತಾ, ಮಾತಿನ ಮೇಲೆ ಹಿಡಿತ ಇದೆ, ನಡವಳಿಕೆ ಮೇಲೆ ಹಿಡಿತ ಇದೆ. ದೇಹಗಳಿಗೆ ಗಾಯವಾಗಿದ್ದರು, ತಾನು ಆಡೋದಕ್ಕೆ ಆಗಲ್ಲ ಎನ್ನುವು ಸಂದರ್ಭ ಬಂದಾಗಲೂ ಕೂಡಾ ಒಂದು ಬಾರಿಯೂ ಆ ಕುರಿತಾಗಿ ನೆಗೆಟಿವ್ ಆಗಿ ಯೋಚನೆ ಮಾಡದೆ ಪ್ರೀತಿ, ಎನರ್ಜಿ, ಲವಲವಿಕೆಯಿಂದ ಪಾಸಿಟಿವ್ ಯೋಚನೆಗಳ ಜೊತೆಗೆ ಆಟ ಆಡುತ್ತಾ ಇರುವ ದಿವ್ಯಾ ಉರುಡುಗ ಅವರಿಗೆ ನಾನು ಕಿಚ್ಚನ ಚಪ್ಪಾಳೆಯನ್ನು ನೀಡುತ್ತಿದ್ದೇನೆ ಎಂದು ಸುದೀಪ್ ಹೇಳಿದಾಗ ದಿವ್ಯಾ ಅವರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಕಿಚ್ಚನ ಚಪ್ಪಾಳೆ ಎಷ್ಟು ಮುಖ್ಯ ಎನ್ನುವುದು ನನಗೆ ಗೊತ್ತಿದೆ ಸರ್. ಇದರ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ನೀವು ಹೇಳಿರುವ ಮಾತುಗಳಿಗೆ ತುಂಬಾ ಅರ್ಥ ಇದೆ ಸರ್. ತುಂಬಾ ಧನ್ಯವಾದಗಳು ಸರ್ ಎಂದು ದಿವ್ಯಾ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಶುಭಾ ಅವರು ತುಂಬಾ ಚೆನ್ನಾಗಿ ಆಡಿದ್ದಾರೆ. ಅವರ ಆಟದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅರವಿಂದ್ ಅವರು ನಾಮಿನೇಷನ್ ನಲ್ಲಿ ಇರಲಿಲ್ಲ ಆದರೆ ಚೆನ್ನಾಗಿ ಆಡಿದ್ದಾರೆ. ಇದೆ ಪಾಸಿಟಿವ್ ಎನರ್ಜಿ ಇರಲಿ. ಮುಂದಿನ ದಿನಗಳಲ್ಲಿ ಎಲ್ಲರೂ ಚೆನ್ನಾಗಿ ಆಡಿ ಎಂದು ಸುದೀಪ್ ಸ್ಪರ್ಧಿಗಳಿಗೆ ಶುಭ ಹಾರೈಸಿದ್ದಾರೆ.

The post ದಿವ್ಯಾ ಉರುಡುಗಗೆ ಬಿಗ್‍ಬಾಸ್ ಪ್ರಯಾಣದ ಕಿಚ್ಚನ ಚಪ್ಪಾಳೆ appeared first on Public TV.

Source: publictv.in

Source link