ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಇದ್ದು, ಜನರನ್ನು ರಂಜಿಸುತ್ತಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಸಣ್ಣ ಜಗಳವಾಗಿದ್ದರಿಂದ ಮುನಿಸಿಕೊಂಡು ಮಾತನಾಡುವುದನ್ನು ಬಿಟ್ಟಿದ್ದರು. ಆದರೆ ಇದೀಗ ಬಿಗಿದಪ್ಪಿಕೊಳ್ಳುವ ಮೂಲಕ ಒಂದಾಗಿದ್ದಾರೆ.

ಹೌದು ಬಿಗ್ ಬಾಸ್ ನೀಡಿದ್ದ ಮುತ್ತು ಹುಡುಕುವ ಟಾಸ್ಕ್ ವೇಳೆ ಇಬ್ಬರ ನಡುವೆ ಸಣ್ಣ ಜಗಳವಾಗಿರುತ್ತದೆ. ಆ ಬಳಿಕ ಇಬ್ಬರೂ ಮಾತನಾಡುವುದನ್ನು ಬಿಡುತ್ತಾರೆ. ದಿವ್ಯಾ ಉರುಡುಗ ಮಾತನಾಡಿಸಿದರೂ ಅರವಿಂದ್ ಮಾತನಾಡದೆ ಸದ್ಯಕ್ಕೆ ಮಾತನಾಡಲು ಇಷ್ಟ ಇಲ್ಲ ಎಂದು ಹೇಳುತ್ತಾರೆ, ಆಗ ದಿವ್ಯಾ ಉರುಡುಗ ಬೇಸರದಿಂದ ಬೆಡ್ ರೂಂ ಕಡೆಗೆ ಹೋಗುತ್ತಾರೆ. ಇದಾದ ಬಳಿಕ ಇಂದು ಬೆಳಗ್ಗೆ ದಿವ್ಯಾ ಉರುಡುಗ ಅವರನ್ನು ಸ್ವತಃ ಅರವಿಂದ್ ಬಿಗಿದಪ್ಪುತ್ತಾರೆ. ಆಗ ದಿವ್ಯಾ ಉರುಡುಗ ಸಹ ಗಟ್ಟಿಯಾಗಿ ಹಿಡಿದು ಹಗ್ ಮಾಡುತ್ತಾರೆ. ಈ ವೇಳೆ ಇಬ್ಬರೂ ಭಾವುಕರಾಗುತ್ತಾರೆ, ಇಬ್ಬರ ಕಣ್ಣಂಚಲ್ಲಿ ನೀರು ಬರುತ್ತವೆ.

ಬಳಿಕ ಅರವಿಂದ್ ದಿವ್ಯಾ ಜೊತೆಗೆ ಗಾರ್ಡನ್ ಏರಿಯಾಗೆ ಬಂದು ಹಗ್ ಮಾಡಿಕೊಂಡೇ ನಿಲ್ಲುತ್ತಾರೆ. ಅರವಿಂದ್ ಮಾತನಾಡಿಸದ್ದಕ್ಕೆ ದಿವ್ಯಾ ಉರುಡುಗ ಫುಲ್ ಅಪ್ಸೆಟ್ ಆಗಿರುತ್ತಾರೆ. ಯಾರೊಂದಿಗೂ ಸರಿಯಾಗಿ ಮಾತನಾಡಿರಲಿಲ್ಲ. ಇದೀಗ ಅರವಿಂದ್ ಹಗ್ ಮಾಡಿದ್ದಕ್ಕೆ ದಿವ್ಯಾ ಉರುಡುಗ ಫುಲ್ ಆಕ್ಟಿವ್ ಆಗಿದ್ದು, ಕಿಚನ್‍ನಲ್ಲಿ ಕೆಲಸ ಮಾಡುವಾಗ ಶುಭಾ ಪೂಂಜಾ ಸಹ ದಿವ್ಯಾಗೆ ಕಿಂಡಲ್ ಮಾಡುತ್ತಾರೆ. ನೀನು ನಿನ್ನೆ ದೇವದಾಸ್ ಮೂಡಲ್ಲಿದ್ದೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ನಗುತ್ತ ಈಗಲೂ ಹಾಗೇ ಇದ್ದೇನೆ ಎನ್ನುತ್ತಾರೆ.

ಇದಾದ ಬಳಿಕ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಅರವಿಂದ್ ಬಳಿ ದಿವ್ಯಾ ಉರುಡುಗ ಆಗಮಿಸುತ್ತಾರೆ. ಆಗ ಅರವಿಂದ್ ಬಟ್ಟೆಯನ್ನು ನೆನೆಸಿಡು ಎನ್ನುತ್ತಾರೆ. ಹೀಗೆ ಮಾತನಾಡುತ್ತಲೇ ದಿವ್ಯಾ ಭಾವುಕರಾಗಿ ಅರವಿಂದ್ ಅವರನ್ನು ಮತ್ತೊಮ್ಮೆ ತಬ್ಬಿಕೊಳ್ಳುತ್ತಾರೆ. ಹೀಗೆ ಪ್ರಣಯ ಪಕ್ಷಿಗಳು ಇಂದು ಒಂದಾಗುವ ಮೂಲಕ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ.

The post ದಿವ್ಯಾ ಉರುಡುಗರನ್ನು ಬಿಗಿದಪ್ಪಿದ ಅರವಿಂದ್- ಒಂದಾದ ಪ್ರಣಯ ಪಕ್ಷಿಗಳು appeared first on Public TV.

Source: publictv.in

Source link