ರವಿಂದ್ ದಿವ್ಯಾ ಉರುಡುಗ ಜೊತೆ ಎಷ್ಟೇ ಇದ್ದರೂ ಎಲ್ಲರನ್ನೂ ಸಂಭಾಳಿಸುತ್ತಾನೆ, ಮಾತನಾಡಿಸುತ್ತಾನೆ, ನಮಗೂ ಟೈಮ್ ಕೊಡುತ್ತಾನೆ. ದಿವ್ಯಾ ಉರುಡುಗ ಬಂದ್ರೆ ಅರವಿಂದ್ ಸರಿ ಹೋಗಬಹುದು ಎಂದು ಚಕ್ರವರ್ತಿ ಚಂದ್ರಚೂಡ್ ಮತ್ತೆ ಬಿಗ್ ಮನೆಯಲ್ಲಿ ದಿವ್ಯಾ ನೆನಪಿಸಿಕೊಂಡಿದ್ದಾರೆ.

ಹುಡ್ಗ-ಹುಡ್ಗಿ ಜೋಡಿಯಾಗಿದ್ರೆ ಒಂದು ರೀತಿಯ ಪ್ಯಾಂಪರಿಂಗ್ ಇರುತ್ತೆ, ಹುರುಪಿನಿಂದ ಟಾಸ್ಟ್ ಮಾಡುತ್ತಾರೆ. ಆದರೆ ನಮಗೆ ಪೇರ್ ಇಲ್ಲದಕ್ಕೆ ಹೀಗೆ ಆಗುತ್ತಿದೆ. ಈಗ ದಿವ್ಯಾ ಇಲ್ಲದ್ದಕ್ಕೆ ಅರವಿಂದ್ ಎನರ್ಜಿ ಕುಸಿಯುತ್ತಿದೆ. ವೈಷ್ಣವಿ ಹಾಗೂ ಅರವಿಂದ್‍ಗೂ ಪೇರ್ ಆಗಲ್ಲ. ಈಗ ದಿವ್ಯಾ ಬಂದ್ರೆ ಅರವಿಂದ್ ಸರಿ ಹೋಗಬಹುದು. ಆದರೆ ಅರವಿಂದ್ ತುಂಬಾ ಒಳ್ಳೆ ಹುಡುಗ ಗುರು, ನನಗೆ ಒಬ್ಬಬ್ಬರ ಬಗ್ಗೆ ಹೇಳಿ ಎಂದು ಕೇಳಿದರೆ, ಸರಿಯಾಗಿ ಹೇಳುತ್ತೇನೆ. ಇವರೆಗೆಲ್ಲ ಹೆದರುವುದಿಲ್ಲ ಎಂದು ಚಕ್ರವರ್ತಿ ನೇರವಾಗಿ ಮಾತನಾಡಿದ್ದಾರೆ.

ಮಂಜು ಪಾವಗಡ ಬಗ್ಗೆ ಸಹ ಚಕ್ರವರ್ತಿ ಅಸಮಾಧಾನ ಹೊರ ಹಾಕಿದ್ದಾರೆ. ಮನೆಯ ಎಂಟರ್‍ಟೈನರ್, ವಿದೂಷಕ ಎನ್ನುವುದು ತಿಳಿದ ವಿಚಾರ. ಆದರೆ ಮಂಜು ತಮ್ಮ ಹಾಸ್ಯ ಪ್ರಜ್ಞೆ ಬಗ್ಗೆ ಮೈಮರೆತಿದ್ದಾರೆ. ಹೀಗಾಗಿ ಮನೆಯಲ್ಲಿ ಗುಸುಗುಸು ಶುರುವಾಗಿದ್ದು, ಒಂದು ಹುಡುಗಿಗಾಗಿ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಹೇಳಿದ್ದಾರೆ.

ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿಯವರು ಎಲ್ಲ ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಿರುವಾಗ ಮಂಜು ಪಾವಗಡ ಬಗ್ಗೆ ಸಹ ಮಾತನಾಡಿದ್ದು, ವಿದೂಷಕರಾಗಿ ಕೆಲಸ ಮಾಡುವುದು ತುಂಬಾ ಕಷ್ಟ. ಮತ್ತೊಬ್ಬರನ್ನು ನಗಿಸುವುದು ಸುಲಭವಲ್ಲ, ಆದರೆ ಒಂದು ಹುಡುಗಿಗಾಗಿ ಮಂಜು ತನ್ನ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ. ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿದ್ದಾನೆ ಎಂದು ಚಕ್ರವರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಚಕ್ರವರ್ತಿ ಮಾತ್ರವಲ್ಲ, ಈ ಹಿಂದೆ ಕಿಚ್ಚ ಸುದೀಪ್ ಸಹ ಮಂಜುಗೆ ನೇರವಾಗಿ ಹೇಳಿದ್ದರು. ನೀವು ಒಬ್ಬ ಎಂಟರ್‍ಟೈನರ್, ಹಾಸ್ಯ ಕಲಾವಿದರು ಎನ್ನುವುದನ್ನೇ ಮರೆಯುತ್ತಿದ್ದೀರಿ ಎಂದು ಎಚ್ಚರಿಸಿದ್ದರು. ಆದರೂ ಮಂಜು ಮಾತ್ರ ಎಚ್ಚರವಾಗಿಲ್ಲ.

ಮಂಜು ಬಗ್ಗೆ ಮುಂದುವರಿದು ಮಾತನಾಡಿರುವ ಚಕ್ರವರ್ತಿ, ದಿವ್ಯಾ ಸುರೇಶ್ ಹೋದರೆ ಮಂಜು ಕಥೆ ಅಷ್ಟೇ ಎಂದು ಚಕ್ರವರ್ತಿ ಹೇಳುತ್ತಾರೆ. ಇಲ್ಲ ದಿವ್ಯಾ ಹೋದರೆ ಮತ್ತೊಬ್ಬರನ್ನು ಜೊತೆ ಮಾಡಿಕೊಳ್ಳುತ್ತಾನೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ಇಂದು ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಿದ ಕಣ್ಮಣಿ ಸಹ ಮಂಜುಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹಾಸ್ಯ ಕಲಾವಿದರಾಗಿ ಎಲ್ಲರನ್ನೂ ನಗಿಸಲು ಇನ್ನೂ ಎಷ್ಟು ದಿನಗಳು ಬೇಕು ಎಂದು ಪ್ರಶ್ನಿಸಿದ್ದಾರೆ. ಆಗ ನಾನು ಮನೆಯಲ್ಲಿದ್ದರೆ ಸೋಮವಾರದಿಂದ ನಗಿಸುತ್ತೇನೆ ಎಂದು ಮಂಜು ಹೇಳಿದ್ದಾರೆ. ಆದರೆ ಈಗ ಒಂದು ವಾರ ವೇಸ್ಟ್ ಆಯಿತಲ್ಲ ಎಂದು ಕಣ್ಮಣಿ ಬೇಸರ ವ್ಯಕ್ತಪಡಿಸಿದ್ದಾರೆ.

The post ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು appeared first on Public TV.

Source: publictv.in

Source link