ಬಿಗ್‍ಬಾಸ್ ಮನೆಯಲ್ಲಿ ಅರವಿಂದ್, ವಿದ್ಯಾ ಉರುಡುಗ ಎಂತಹಾ ಒಳ್ಳೆಯ ಸ್ನೇಹಿತರು ಎನ್ನುವುದು ತಿಳಿದಿರುವ ವಿಷಯ. ಆದರೆ ದಿವ್ಯಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಅರವಿಂದ್ ತಮಗೆ ಗೊತ್ತಾಗದಂತೆ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ.

ಹೌದು. ದಿವ್ಯಾ ಬಿಗ್‍ಬಾಸ್ ಮನೆಯಿಂದ ಆಚೆ ಹೋದ ದಿನದಿಂದಲೂ ಅರವಿಂದ್, ಅಷ್ಟೇನೂ ಆ್ಯಕ್ಟೀವ್ ಆಗಿಲ್ಲ. ಒಬ್ಬಂಟಿಯಾಗಿ ಕುಳಿತುಕೊಂಡೇ ಹೆಚ್ಚು ಕಾಲ ಕಳೆಯುತ್ತಾರೆ. ಏನೋ ಒಂದು ಯೋಚನೆಯಲ್ಲಿ ಮುಳುಗಿದ್ದಂತೆ ಅರವಿಂದ್ ಕಾಣುತ್ತಿದೆ. ಗಾರ್ಡನ್ ಏರಿಯಾದಲ್ಲಿ ಒಬ್ಬರೆ ಕುಳಿತಿರುತ್ತಾರೆ. ಆಗ ಮಂಜು ಅರವಿಂದ್ ಅವರಿಗೆ ಏನೋ ಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಳ್ಳಲೇ ಬೇಕು ನನಗೂ ಅವಳ ನೆನೆಪು ಕಾಡುತ್ತಿದೆ ಎಂದು ಅರವಿಂದ್‍ಗೆ ಸಮಾಧಾನ ಮಾಡಿದ್ದಾರೆ. ಆಗ ಅರವಿಂದ್ ಅವರ ಕಣ್ಣಂಚಲ್ಲಿ ನೀರು ಜಾರಿತ್ತು.

ಅರವಿಂದ್, ನಿಧಿ, ವೈಷ್ಣವಿ, ಮಂಜು ಮನೆಯಲ್ಲಿ ಒಂದು ಕಡೆ ಕುಳಿತು ಮಾತನಾಡುತ್ತಾ ಇದ್ದರು. ಆಗ ಅರವಿಂದ್ ಮಾತನಾಡುತ್ತಾ ಹಾಗೇ ನಿದ್ದೆಗೆ ಹೋಗಿದ್ದಾರೆ. ಆಗ ಬಿಗ್‍ಬಾಸ್ ಎದ್ದೇಳು ಮಂಜುನಾಥ ಎದ್ದೇಳು ಮಂಜುನಾಥ.. ಎಂದು ಸಾಂಗ್ ಹಾಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಇದೆ ಮೊದಲ ಬಾರಿಗೆ ಅರವಿಂದ್ ಹಗಲು ನಿದ್ದೆ ಮಾಡಿ ಬಿಗ್‍ಬಾಸ್ ಮನೆಯ ನಿಯಮವನ್ನು ಇದೇ ಮೊದಲು ಬ್ರೇಕ್ ಮಾಡಿದ್ದಾರೆ ಎಂದು ಮನೆ ಮಂದಿ ಹೇಳಿದ್ದಾರೆ. ಅರವಿಂದ್ ಮಾತ್ರ ಕಿರು ನಗೆ ಬೀರುತ್ತಾ ಎದ್ದು ಕುಳಿತ್ತಿದ್ದಾರೆ.

ದಿವ್ಯಾ ಅನಾರೋಗ್ಯದಿಂದ ಬಿಗ್‍ಬಾಸ್ ಮನೆಯಿಂದ ಆಚೆಹೋಗಿರುವುದು ಅರವಿಂದ್‍ಗೆ ಮಾತ್ರ ಸಖತ್ ಬೇಜಾರ್ ಉಂಟುಮಾಡಿದೆ. ಅರವಿಂದ್ ಮನೆಯಲ್ಲಿ ಯಾರೊಂದಿಗೂ ಬೆರೆಯದೆ ತುಂಬಾ ಬೇಜಾರ್‍ನಲ್ಲಿ ಇದ್ದಾರೆ. ದಿವ್ಯಾ ಆರೋಗ್ಯ ಚೇತರಿಸಿಕೊಂಡು ಆದಷ್ಟು ಬೇಗ ಬಂದು ಅರವಿಂದ್ ಮತ್ತು ದಿವ್ಯಾ ಮೊದಲಿನಂತೆ ಆಟವಾಡುವಂತಾಗಲಿ ಎಂದು ಬಿಗ್‍ಬಾಸ್ ವೀಕ್ಷಕರು ಹೇಳುತ್ತಿದ್ದಾರೆ.

The post ದಿವ್ಯಾ ನೆನಪಿಸಿಕೊಂಡು ಮತ್ತೆ ಮತ್ತೆ ಕಣ್ಣೀರಿಟ್ಟ ಅರವಿಂದ್ appeared first on Public TV.

Source: publictv.in

Source link