ದಿವ್ಯಾ ಸುರೇಶ್‌ ಮೇಲೆ ಅರವಿಂದ್‌ ಕೆಪಿ ಆಕ್ರೋಶ! ಆಗಿದ್ದೇನು?

ದಿವ್ಯಾ ಸುರೇಶ್‌ ಮೇಲೆ ಅರವಿಂದ್‌ ಕೆಪಿ ಆಕ್ರೋಶ! ಆಗಿದ್ದೇನು?

ನಿನ್ನೆ ಇನ್ನೊಂದ್ ಗೇಮ್ ನಡೀತು. ಆಡಿದ್ದು ದಿವ್ಯಾ ವರ್ಸಸ್ ದಿವ್ಯಾ. ಗಮನ ಸೆಳೆದಿದ್ದು ಮಾತ್ರ ಅರವಿಂದ್‌ ಕೆ.ಪಿ. ಟಾಸ್ಕ್ ನಡೆಯೋ ಟೈಮ್‌ನಲ್ಲಿ ಸ್ಪರ್ಧಿಗಳು ಮ್ಯೂಟ್ ಆಗಿದ್ರೂ ಅರವಿಂದ್‌ ಮಾತ್ರ ಕಿರುಚುತ್ತಿದ್ರು. ಕಮಾನ್ ಕಮಾನ್‌ ಅಂತಾ ಹುರುಪು ತುಂಬುತ್ತಿದ್ರು. ಆ ಥರಾ ಉತ್ತೇಜನ ಕೊಟ್ರೆ ಯಾರ್ ತಾನೇ ಸೋಲ್ತಾರೆ ಹೇಳಿ.

ದಿವ್ಯಾ ವರ್ಸಸ್ ದಿವ್ಯಾ ಗೇಮ್‌ ಒನ್‌ ವೇ ಆಗಿತ್ತು. ದಿವ್ಯಾ ಸುರೇಶ್‌ ಎಫರ್ಟ್ ಹಾಕಿದ್ರೂ ಯಾಕೋ ಗೆಲ್ಲಲಿಲ್ಲ. ದಿವ್ಯಾ ಉರುಡುಗ ಪರ್ಫಾಮೆನ್ಸ್‌ ಜೋರಾಗಿಯೇ ಇತ್ತು. ಬಿಂದಿ ಗೇಮ್‌ನಲ್ಲಿ ಸೋತಿರೋ ರಿವೇಂಜ್ ತೀರಿಸಿಕೊಳ್ಳಲು ದಿವ್ಯಾ ಉರುಡುಗ ಹವಣಿಸುತ್ತಿದ್ದರು. ಅದನ್ನ ಈ ಗೇಮ್‌ನಲ್ಲಿ ತೀರಿಸಿಕೊಂಡರು.

ಕೊನೆಗೆ ಗೆದ್ದಿದ್ದು ದಿವ್ಯಾ ಉರುಡುಗನೇ. ಈ ನಡುವೆ ದಿವ್ಯಾ ಸುರೇಶ್ ಮೇಲೆ ಅರವಿಂದ್ ಆಕ್ರೋಶ ವ್ಯಕ್ತಪಡಿಸಿದರು. ಗೇಮ್‌ನ ಮಧ್ಯೆ ಅರವಿಂದ್‌, ನೀವ್ಯಾಕೆ ಈ ಥರಾ ಆಡ್ತೀರಾ? ಸರಿಯಾಗಿ ಆಡ್ಬೇಕು ಅಂತಾ ಹೇಳಿದರು.

ಇನ್ನೊಂದೆಡೆ, ಗೇಮ್‌ನಲ್ಲಿ ದಿವ್ಯಾ ಕಾಲಿಗೆ ಪೆಟ್ಟು ಬಿತ್ತು. ಕೊನೆಗೆ ದಿವ್ಯಾ ಸುರೇಶ್‌ನ ಬಿಗ್‌ಬಾಸ್‌ ಕನ್ಫೇಷನ್‌ ರೂಮ್‌ ಕರೆಸಿ, ಟ್ರೀಟ್‌ಮೆಂಟ್‌ ಕೊಡಿಸಿದರು. ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ದಿವ್ಯಾ ಸುರೇಶ್‌ ಕಣ್ಣೀರಿಟ್ಟರು. ಚಿಕಿತ್ಸೆಯ ನಂತರ ನಾರ್ಮಲ್ ಆದರು.

The post ದಿವ್ಯಾ ಸುರೇಶ್‌ ಮೇಲೆ ಅರವಿಂದ್‌ ಕೆಪಿ ಆಕ್ರೋಶ! ಆಗಿದ್ದೇನು? appeared first on News First Kannada.

Source: newsfirstlive.com

Source link