ಬಿಗ್‍ಬಾಸ್ ಮನೆಯಲ್ಲಿರುವ ಶಮಂತ್ ಮಲ್ಟಿಟ್ಯಾಲೆಂಟ್ ಎನ್ನುವುದು ಗೊತ್ತಿರುವ ವಿಷಯವಾಗಿದೆ. ಮೊದ ಮೊದಲು ಅಷ್ಟೇನು ಆ್ಯಕ್ಟಿವ್ ಆಗಿರದ ಶಮಂತ್ ಇದೀಗ ಮನೆಯಲ್ಲಿ ಸಖತ್ ಮನರಂಜನೆಯನ್ನು ನೀಡುತ್ತಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಶಮಂತ್ ಟಾಸ್ಕ್ ಹೊರತು ಪಡಿಸಿ ಮನರಂಜನೆಯ ಕುರಿತಾಗಿ ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ದಿವ್ಯಾ ಸುರೇಶ್ ಮೇಲೆ ಶಮಂತ್‍ಗೆ ಕ್ರಶ್ ಇದೆ ಎನ್ನುವುದು ಆಗಾಗ ಕೆಲವು ವಿಚಾರಗಳಲ್ಲಿ ಗೊತ್ತಾತ್ತಲೇ ಇದೆ. ಆದರೆ ಇದೀಗ ದಿವ್ಯಾ ಸುರೇಶ್ ಮೇಲೆ ಒಂದು ಹಾಡನ್ನು ಹಾಡಿದ್ದಾರೆ. ದಿವ್ಯಾ ಕೂಡಾ ಶಮಂತ್ ಸಾಂಗ್‍ಗೆ ಮೆಚ್ಚಿ ಡಾನ್ಸ್ ಮಾಡಿದ್ದಾರೆ.

ದಿವ್ಯಾ ಸರೇಶ್ ಮತ್ತು ಶಮಂತ್ ಬಾತ್ ರೂಮ್ ಏರಿಯಾದಲ್ಲಿ ಇರುತ್ತಾರೆ. ಆಗ ಶಮಂತ್ ಎದೆಯಲ್ಲಿ ದಿವ್ಯಾ ಸುರೇಶ್ ಹಾವಳಿ ಜಾಸ್ತಿಯಾಗಿದೆ… ನನ್ನ ಹತ್ತಿರ ಬರಲಾರಳು ನಾನುಕರಿಯದೆ… ಓ ದಿವ್ಯಾ ಸುರೇಶ್ ಓ ದಿವ್ಯ ಸುರೇಶ್ ನೀನು ನನ್ನಾ ಪ್ರಾಣ ಕಣೆ ಹಿಂದೆ ಹೋಗು..ಹಿಂದೆ ಹೋಗು.. ದಿವ್ಯಾ ಸುರೇಶ್ ಜೊತೆ ಮಂಜಣ್ಣಾ ಇದ್ದರೂ ಹಿಂದೆ ಹೋಗು ಸಿಕ್ಕುತ್ತಾಳೆ ಸುಂದರಿ ಎಂದು ಹಾಡಿದ್ದಾರೆ. ಇದನ್ನು ಕೇಳಿದ ದಿವ್ಯಾ ಸುರೇಶ್ ಶಮಂತ್ ಸಾಂಗ್‍ಗೆ ಮಸ್ತ್ ಸ್ಟೇಪ್ಸ್ ಹಾಕಿದ್ದಾರೆ.

 ಹುಡುಗಿಗೆ ಕಾಳು ಹಾಕುವುದಕ್ಕೆ ಶಮಂತ್ ಬಿಗ್‍ಬಾಸ್ ಮನೆಗೆ ಬಂದಂತಿದೆ ಎಂದು ದಿವ್ಯಾ ಸುರೇಶ್ ಈ ಹಿಂದೆ ಹೇಳಿದ್ದರು. ಆದರೆ ಇದೀಗ ದಿವ್ಯಾ ಶಮಂತ್ ತನ್ನ ಮೇಲೆ ಸಾಂಗ್ ಹೇಳಿದ್ದಕ್ಕೇ ಸಂತೋಷದಿಂದ ಸ್ಟೇಪ್ಸ್ ಹಾಕಿದ್ದಾರೆ. ಶಮಂತ್‍ಗೆ ಕಣ್ಮಣಿ ಹೇಳಿದಾಗಿನಿಂದಲೂ ಪ್ರತಿನಿತ್ಯ ಒಂದೊಂದುಯ ಸಾಂಗ್ ಹೇಳುತ್ತಿದ್ದಾರೆ. ಸಖತ್ ಮನರಂಜನೆಯನ್ನು ನೀಡುತ್ತಿದ್ದಾರೆ.

The post ದಿವ್ಯಾ ಸುರೇಶ್ ನೀನು ನನ್ನ ಪ್ರಾಣ ಕಣೆ- ಶಮಂತ್ appeared first on Public TV.

Source: publictv.in

Source link