ಬೆಂಗಳೂರು: ಕೇಂದ್ರ ಸರ್ಕಾರದ ಸದಸ್ಯರಾದ ಜಿ.ಟಿ. ಸುರೇಶ್ ಕುಮಾರ್‌ ಮತ್ತು ಶಿವಯ್ಯ ಸ್ವಾಮಿರವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್‌ರವರನ್ನು ವಿಧಾನ ಸೌಧದಲ್ಲಿ ಭೇಟಿಯಾಗಿ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ದಿಶಾ ಸಮಿತಿ ಸಭೆ ಶೀಘ್ರ ಆಯೋಜಿಸುವ ಕುರಿತು ಚರ್ಚೆ ನಡೆಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮುಖ್ಯಮಂತ್ರಿಯವನ್ನು ಇಂದೇ ಭೇಟಿಯಾಗಿ ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸುವ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ಮುಖ್ಯ ಮಂತ್ರಿಗಳು ತಕ್ಷಣ ಸಭೆ ಕರೆದು ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆಗೆ ಸಭೆಯನ್ನು ಆಯೋಜಿಸಬೇಕು ಹಾಗೂ ಕೇಂದ್ರದಲ್ಲಿ ಬಾಕಿ ಇರುವ ಪುಸ್ತಾವನೆಗಳನ್ನು ಅನುಮೋದನೆ ಪಡೆಯಲು ಸಮಿತಿಯ ನಿಯೋಗ ದೆಹಲಿಗೆ ತೆರಳಿ ವಿಶೇಷ ಅನುದಾನವನ್ನು ಪಡೆಯಲು ಕ್ರಮ ಕೈಗೊಳ್ಳಬೇಕೆಂಬ ಸದಾಶಯವನ್ನು ಕೇಂದ್ರ ಸರ್ಕಾರದ ಸದಸ್ಯರಾದ ಜಿ.ಟಿ. ಸುರೇಶ್ ಕುಮಾರ್, ಶಿವಯ್ಯ ಸ್ವಾಮಿ ಮತ್ತು ವೈ.ಎಂ. ಬೆಂಡಿಗೇರಿರವರು ವ್ಯಕ್ತಪಡಿಸಿದರು.

The post ದಿಶಾ ಸಮಿತಿ ಶೀಘ್ರ ಆಯೋಜನೆ ವಿಚಾರ; ಮುಖ್ಯ ಕಾರ್ಯದರ್ಶಿ ಭೇಟಿಯಾದ ಕೇಂದ್ರ ಸದಸ್ಯರು appeared first on News First Kannada.

Source: newsfirstlive.com

Source link