ದಿಶಾ ಸಮಿತಿ ಸಭೆ ಶೀಘ್ರ ಆಯೋಜಿಸಲು ಕೇಂದ್ರ ಸದಸ್ಯರ ನಿಯೋಗದ ಭೇಟಿ.. ಸುದ್ದಿಗೋಷ್ಠಿ

ದಿಶಾ ಸಮಿತಿ ಸಭೆ ಶೀಘ್ರ ಆಯೋಜಿಸಲು ಕೇಂದ್ರ ಸದಸ್ಯರ ನಿಯೋಗದ ಭೇಟಿ.. ಸುದ್ದಿಗೋಷ್ಠಿ

ಬೆಂಗಳೂರು: ರಾಜ್ಯದಲ್ಲಿ ದಿಶಾ ಸಮಿತಿ ಸಭೆಯನ್ನು ದಿನಾಂಕ 6ನೇ ಅಕ್ಟೋಬರ್ 2020, 11ನೇ ಜನವರಿ 2021ರಂದು, 13ನೇ ಜನವರಿ 2021ರಂದು ಮತ್ತು 5ನೇ ಜೂಲೈ 2021ರಂದು ಹೀಗೆ ನಾಲ್ಕು ಬಾರಿ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ನಾಲ್ಕು ಬಾರಿ ಕೂಡ ಸಭೆಯನ್ನು ಮಾಡದೇ ಮುಂದೂಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು 4ನೇ ಜೂನ್, 2020ರಂದು ಮಾನ್ಯ ಲೋಕಸಭಾ ಸದಸ್ಯರು, ಕೇಂದ್ರ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರು, ವಿಧಾನ ಸಭೆ ಸದಸ್ಯರು ಸಭೆಯನ್ನು ಆಯೋಜಿಸಬೇಕೆಂದು ಅನೇಕ ಬಾರಿ ಮುಖ್ಯಮಂತ್ರಿಯವರನ್ನು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಕೇಂದ್ರ ಸರ್ಕಾರದ ಸದಸ್ಯರು ಕೋರಿದ್ದರು. ದೇಶದ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯನ್ನು ಆಯೋಜಿಸುವ ಮೂಲಕ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಮೇಲುಸ್ತುವಾರಿಯನ್ನು ವಹಿಸಿ ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ಪಡೆಯುತ್ತಿದ್ದಾರೆ, ಆದರೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ಸಭೆಯನ್ನು ಆಯೋಜಿಸದೆ ಇರುವುದರಿಂದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಗೆ ಹಿನ್ನಡೆಯಾಗಿದೆ ಎಂದು ಕೇಂದ್ರ ಸರ್ಕಾರದ ಸದಸ್ಯರಾದ ಜಿ.ಟಿ. ಸುರೇಶ್ ಕುಮಾರ್ ಮತ್ತು ಶಿವಯ್ಯ ಸ್ವಾಮಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ರವಿಕುಮಾರ್‌ರವರನ್ನು ವಿಧಾನ ಸೌಧದಲ್ಲಿ ಭೇಟಿಯಾಗಿ ಬೇರೆ ರಾಜ್ಯಗಳ ಸಭೆಯ ಬಗ್ಗೆ ಮಾಹಿತಿ ನೀಡಿ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ವಿಷಯವನ್ನು ವಿವರಿಸಿದ್ದಾರೆ.

ಕರ್ನಾಟಕದ ದಿಶಾ ಸಮಿತಿ ಸಭೆಯನ್ನು ತಕ್ಷಣ ಕರೆಯಬೇಕೆಂದು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದಿರುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮುಖ್ಯಮಂತ್ರಿಯವರನ್ನು ಇಂದೇ ಭೇಟಿಯಾಗಿ ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸುವ ಬಗ್ಗೆ ಚರ್ಚಿಸುವುದಾಗಿ ಮಾನ್ಯ ಕೇಂದ್ರ ಸರ್ಕಾರದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಗಳು ತಕ್ಷಣ ಸಭೆ ಕರೆದು ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆಗೆ ಸಭೆಯನ್ನು ಆಯೋಜಿಸಬೇಕು ಹಾಗೂ ಕೇಂದ್ರದಲ್ಲಿ ಬಾಕಿ ಇರುವ ಪುಸ್ತಾವನೆಗಳನ್ನು ಅನುಮೋದನೆ ಪಡೆಯಲು ಸಮಿತಿಯ ನಿಯೋಗ ದೆಹಲಿಗೆ ತೆರಳಿ ವಿಶೇಷ ಅನುದಾನವನ್ನು ಪಡೆಯಲು ಕ್ರಮ ಕೈಗೊಳ್ಳಬೇಕೆಂಬ ಸದಾಶಯವನ್ನು ಕೇಂದ್ರ ಸರ್ಕಾರದ ಸದಸ್ಯರಾದ  ಜಿ.ಟಿ. ಸುರೇಶ್ ಕುಮಾರ್ ಮತ್ತು ಶಿವಯ್ಯ ಸ್ವಾಮಿ ವೈ.ಎಂ. ಬೆಂಡಿಗೇರಿರವರು ವ್ಯಕ್ತಪಡಿಸಿದ್ದಾರೆ.

The post ದಿಶಾ ಸಮಿತಿ ಸಭೆ ಶೀಘ್ರ ಆಯೋಜಿಸಲು ಕೇಂದ್ರ ಸದಸ್ಯರ ನಿಯೋಗದ ಭೇಟಿ.. ಸುದ್ದಿಗೋಷ್ಠಿ appeared first on News First Kannada.

Source: newsfirstlive.com

Source link