ದೀಪಕ್​ ಚಹರ್​​ಗೆ ಕಾಡಿದ ಬ್ಯಾಡ್​ ಲಕ್​; IPL​ ಟೂರ್ನಿಯಿಂದ ₹14 ಕೋಟಿ ವೀರ ಔಟ್​..?


ಅದೃಷ್ಟದ ಜೊತೆಗೆ ದುರಾದೃಷ್ಟವು ಇರುತ್ತೆ ಅನ್ನೋ ಮಾತಿದೆ. ಅದು ಸದ್ಯ ದೀಪಕ್​ ಚಹರ್​​ಗೆ ಸರಿಯಾಗಿ ಹೋಲಿಕೆಯಾಗ್ತಿದೆ. ಹರಾಜಿನಲ್ಲಿ ಬರೋಬ್ಬರಿ 14 ಕೋಟಿಯನ್ನ ಚಹರ್​ ಬಾಚಿಕೊಂಡ್ರು ನಿಜ. ಆದ್ರೆ, ಈಗಿನ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ.

ಐಪಿಎಲ್​ ಮೆಗಾ ಹರಾಜು ಕೆಲ ಆಟಗಾರರ ಅದೃಷ್ಟವನ್ನೇ ಬದಲಾಯಿಸಿದೆ. ಕೆಲ ಯುವ ಆಟಗಾರರಂತೂ ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಸೇಲಾಗಿದ್ದಾರೆ. ಅದ್ರಲ್ಲೂ ಇಂಡಿಯನ್ ಸ್ಟಾರ್ ವೇಗಿ ದೀಪಕ್ ಚಹರ್ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ದಾಖಲೆಯ ಮೊತ್ತಕ್ಕೆ ಸಿಎಸ್​ಕೆ ಫ್ರಾಂಚೈಸಿ ಪಾಲಾಗಿದ್ದಾರೆ. ಅಂದು ಕೋಟಿ ಕೋಟಿ ಮೊತ್ತಕ್ಕೆ ಚಹರ್​ ಸೇಲಾದ ಬೆನ್ನಲ್ಲೇ, ಅದೃಷ್ಟವಂತರಂದ್ರೆ ಇವರೇ ನೋಡಿ ಅಂತ ಎಲ್ಲಾ ಮಾತನಾಡಿಕೊಳ್ತಿದ್ರು. ಆದ್ರೀಗ, ಅದೃಷ್ಟದ ಜೊತೆಗೆ ದುರಾದೃಷ್ಟವು ಇರುತ್ತದೆ ಅನ್ನೋದಕ್ಕೆ ಈಗ ಈ ಕೋಟಿ ವೀರ ಸಾಕ್ಷಿಯಾಗಿ ನಿಂತಿದ್ದಾನೆ.

ಐಪಿಎಲ್ ಆಕ್ಷನ್​​ನಲ್ಲಿ ದೀಪಕ್​ ಚಹರ್​ ಖರೀದಿಸೋಕೆ, ರಾಜಸ್ಥಾನ್, ಹೈದ್ರಾಬಾದ್ ಮತ್ತು ಡೆಲ್ಲಿ ಫ್ರಾಂಚೈಸಿಗಳು ಬಿಡ್ಡಿಂಗ್ ವಾರೇ ನಡೆಸಿದ್ವು. ಅಂತಿಮವಾಗಿ 14 ಕೋಟಿ ರೂಪಾಯಿಗೆ ಚೆನ್ನೈ ಸೂಪರ್​​ಕಿಂಗ್ಸ್ ತಂಡ,​ ದೀಪಕ್ ಚಹರ್​ರನ್ನ ಖರೀದಿಸುವಲ್ಲಿ ಯಶಸ್ವಿಯಾಯ್ತು. ಇದರೊಂದಿಗೆ 2022ರ ಐಪಿಎಲ್​​ ಮೆಗಾ ಹರಾಜಿನಲ್ಲಿ ಕಿಶನ್ ಬಳಿಕ, ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರ ಅಂತಾ ದೀಪಕ್ ಚಹರ್ ಎನಿಸಿಕೊಂಡ್ರು.

ವಿಂಡೀಸ್​ ಸರಣಿಯಲ್ಲಿ ದೀಪಕ್​ ಚಹರ್​ಗೆ ಇಂಜುರಿ
14 ಕೋಟಿ ವೀರನ ಸಂಭ್ರಮ, ಇದೀಗ ಮಾಯವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ-ಟ್ವೆಂಟಿ ಪಂದ್ಯದಲ್ಲಿ ಹ್ಯಾಮ್​ಸ್ಟ್ರಿಂಗ್ ಇಂಜುರಿಗೆ ತುತ್ತಾದ ಚಹರ್, ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿ ಪೆವಿಲಿಯನ್ ಸೇರಿಕೊಂಡ್ರು. ಪರಿಣಾಮ ಶ್ರೀಲಂಕಾ ಟಿ-ಟ್ವೆಂಟಿ ಸರಣಿಗೂ ದೀಪಕ್ ಚಹರ್ ಅಲಭ್ಯರಾಗಿದ್ದಾರೆ. ಇದೀಗ ಗುಣಮುಖವಾಗಲು ಇನ್ನೂ ಹೆಚ್ಚು ಸಮಯ ಬೇಕಾಗಿರುವ ಕಾರಣದಿಂದ ಐಪಿಎಲ್ ಸೀಸನ್-15ರಿಂದ ಚಹರ್, ಹೊರಗುಳಿಯುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

ಚಹರ್​ಗೆ ಬೇಕಿದೆ 3 ರಿಂದ 4 ವಾರಗಳ ವಿಶ್ರಾಂತಿ
ಬಿಸಿಸಿಐ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ದೀಪಕ್ ಚಹರ್​ಗೆ ಗಂಭೀರ ಗಾಯವಾಗಿದೆಯಂತೆ. ಹೀಗಾಗಿ ವೈದ್ಯರು ಚಹರ್​​ಗೆ 3 ರಿಂದ 4 ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಹಾಗಿದ್ರೂ ಚಹರ್ ನಿಗಧಿತ ಸಮಯದಲ್ಲಿ ಗುಣಮುಖರಾಗೋದು ಅನುಮಾನ ಎನ್ನಲಾಗ್ತಿದೆ. ಒಂದು ವೇಳೆ ಚಹರ್ ಹ್ಯಾಮ್​ಸ್ಟ್ರಿಂಗ್ ಇಂಜುರಿಯಿಂದ ಸಂಪೂರ್ಣ ಗುಣಮುಖರಾಗಿ ಐಪಿಎಲ್​ಗೆ ಕಮ್​ಬ್ಯಾಕ್ ಮಾಡಿದ್ರೂ,​​ ಆಡೋದು ಕೇವಲ ಕೆಲವೇ ಕೆಲವು ಪಂದ್ಯಗಳನ್ನ ಮಾತ್ರವಂತೆ.

ಒಂದು ವೇಳೆ ದೀಪಕ್ ಚಹರ್ ಐಪಿಎಲ್ ಟೂರ್ನಿಯಿಂದ ಹೊರ ನಡೆದ್ರೆ, ಚೆನ್ನೈ ಸೂಪರ್​ಕಿಂಗ್ಸ್​​ ತಂಡಕ್ಕೆ ಭಾರಿ ಹಿನ್ನಡೆ ಉಂಟಾಗಲಿದೆ. ಟಿ-ಟ್ವೆಂಟಿ ಕ್ರಿಕೆಟ್​ಗೆ ಹೇಳಿ ಮಾಡಿಸಿದಂತಿದ್ದ ಚಹರ್, ಮ್ಯಾಚ್ ವಿನ್ನರ್​ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ​​ಹಾಗಾಗೇ ಚೆನ್ನೈ ಫ್ರಾಂಚೈಸಿ, ಚಹರ್​ರನ್ನ ಎಷ್ಟೇ ಕೋಟಿ ಖರ್ಚಾದ್ರು, ಖರೀದಿಸಲೇಬೇಕು ಅಂತ ಪಣತೊಟ್ಟಿದ್ದು.

ಒಟ್ನಲ್ಲಿ.. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾರಲ್ಲ ಆ ಪರಿಸ್ಥಿತಿ ಇದೀಗ ದೀಪಕ್​ ಚಹರ್​ಗೆ ಬಂದಿದೆ. ಸಿಎಸ್​​ಕೆ ಸ್ಟಾರ್ ಆಟಗಾರ ಐಪಿಎಲ್ ಆಡ್ತಾರಾ ಇಲ್ವಾ ಅನ್ನೋ ಪ್ರಶ್ನೆಗೆ, ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

News First Live Kannada


Leave a Reply

Your email address will not be published. Required fields are marked *