ದೀಪಕ್ ಚಹಾರ್ ಆರತಕ್ಷತೆಯಲ್ಲಿ ಕುಟುಂಬಸ್ಥರೊಂದಿಗೆ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು; ಫೋಟೋ ನೋಡಿ | Deepak Chahar Jaya Bhardwaj reception Suresh Raina and other CSK stars attend grand event in Delhi

Deepak Chahar Reception: ಭಾರತ ತಂಡದ ಆಲ್​ರೌಂಡರ್ ದೀಪಕ್ ಚಹಾರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ದೆಹಲಿಯಲ್ಲಿ ಅದ್ದೂರಿಯಾಗಿ ನವ ದಂಪತಿಗಳ ಆರತಕ್ಷತೆ ಕಾರ್ಯಕ್ರವು ನೆರವೇರಿತತು. ಈ ಕಾರ್ಯಕ್ರಮದಲ್ಲಿ ಅನೇಕ ಆಟಗಾರರು ಭಾಗವಹಿಸಿದ್ದರು.

Jun 04, 2022 | 3:35 PM

pruthvi Shankar

|

Jun 04, 2022 | 3:35 PM
ಭಾರತ ತಂಡದ ಸ್ಟಾರ್ ವೇಗದ ಬೌಲರ್ ದೀಪಕ್ ಚಹಾರ್ ಜೂನ್ 1 ರಂದು ಆಗ್ರಾದ ಪಂಚತಾರಾ ಹೋಟೆಲ್‌ನಲ್ಲಿ ವೈಭವದಿಂದ ವಿವಾಹವಾದರು. ದೀಪಕ್ ತಮ್ಮ ಬಹುದಿನಗಳ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ಸಪ್ತಪದಿ ತುಳಿದರು. ದೀಪಕ್-ಜಯಾ ಕುಟುಂಬಸ್ಥರು ಹಾಗೂ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಇಂದು ನಡೆದ ಆರತಕ್ಷತೆಯಲ್ಲಿ ಚಹಾರ್ ಅವರ ಅನೇಕ ಸಹ ಆಟಗಾರರು ಕಾಣಿಸಿಕೊಂಡರು.

ದೀಪಕ್ ಚಹಾರ್ ಮತ್ತು ಜಯಾ ಅವರ ಆರತಕ್ಷತೆ ದೆಹಲಿಯಲ್ಲಿ ನಡೆಯಿತು, ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅನೇಕ ಸ್ಟಾರ್ ಆಟಗಾರರು ಕಾಣಿಸಿಕೊಂಡರು. ಈ ಸಮಾರಂಭದಲ್ಲಿ ಒಂದು ರೀತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಪುನರ್ಮಿಲನ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಚಿತ್ರಗಳು ಸಾಕಷ್ಟು ವೈರಲ್ ಆಗುತ್ತಿವೆ.

ದೀಪಕ್ ಚಹಾರ್ ಆರತಕ್ಷತೆಯಲ್ಲಿ ಕುಟುಂಬಸ್ಥರೊಂದಿಗೆ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು; ಫೋಟೋ ನೋಡಿ

ಚೆನ್ನೈನ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಈ ಹೊಸ ಜೋಡಿಯೊಂದಿಗಿನ ಆರತಕ್ಷತೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ರೈನಾ ಪತ್ನಿ ಪ್ರಿಯಾಂಕಾ ರೈನಾ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಾ ಗೋಲ್ಡನ್ ಗೌನ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡರೆ, ದೀಪಕ್ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡರು.

ದೀಪಕ್ ಚಹಾರ್ ಆರತಕ್ಷತೆಯಲ್ಲಿ ಕುಟುಂಬಸ್ಥರೊಂದಿಗೆ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು; ಫೋಟೋ ನೋಡಿ

ರೈನಾ ಅವರಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರಾಬಿನ್ ಉತ್ತಪ್ಪ, ಪಿಯೂಷ್ ಚಾವ್ಲಾ ತಮ್ಮ ಕುಟುಂಬದೊಂದಿಗೆ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ಆಟಗಾರರು ಆರತಕ್ಷತೆಯಲ್ಲಿ ಮೋಜಿನ ಮೂಡ್‌ನಲ್ಲಿ ಕಾಣಿಸಿಕೊಂಡರು. ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಕೂಡ ಆರತಕ್ಷತೆಗೆ ಬರುತ್ತಾರೆ ಎಂದು ಹೇಳಲಾಗಿದ್ದರೂ ಅದು ಆಗಲಿಲ್ಲ.

ದೀಪಕ್ ಚಹಾರ್ ಆರತಕ್ಷತೆಯಲ್ಲಿ ಕುಟುಂಬಸ್ಥರೊಂದಿಗೆ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು; ಫೋಟೋ ನೋಡಿ

ಮಹಿಳಾ ಕ್ರಿಕೆಟರ್ ಪೂನಂ ಯಾದವ್ ದೀಪಕ್ ಚಾಹರ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು. ಪೂನಂ ಆಗ್ರಾ ನಿವಾಸಿ. ಆದರೆ, ಇವರನ್ನು ಬಿಟ್ಟರೆ ಬೇರೆ ಯಾವ ಕ್ರಿಕೆಟಿಗರೂ ಮದುವೆಯಲ್ಲಿ ಕಾಣಿಸಿಕೊಂಡಿಲ್ಲ.

Most Read Stories

TV9 Kannada

Leave a Reply

Your email address will not be published. Required fields are marked *