ದೀಪಾವಳಿಗೆ ಮನೆಗೆ ಕಳಿಸಬೇಕು ಎಂದು ಆಸ್ಪತ್ರೆಯಲ್ಲಿ ಉಪವಾಸ ಕುಳಿತ ಸುಕ್ರಿ ಬೊಮ್ಮಗೌಡ; ಆಕ್ಸಿಜನ್ ಸಹಿತ ಮನೆಗೆ ಶಿಫ್ಟ್ | Sukri Bommagowda demands to send her home from hospital for Deepavali Celebrations 2021


ದೀಪಾವಳಿಗೆ ಮನೆಗೆ ಕಳಿಸಬೇಕು ಎಂದು ಆಸ್ಪತ್ರೆಯಲ್ಲಿ ಉಪವಾಸ ಕುಳಿತ ಸುಕ್ರಿ ಬೊಮ್ಮಗೌಡ; ಆಕ್ಸಿಜನ್ ಸಹಿತ ಮನೆಗೆ ಶಿಫ್ಟ್

ಸುಕ್ರಿ ಬೊಮ್ಮಗೌಡ

ಕಾರವಾರ: ದೀಪಾವಳಿ ಹಬ್ಬಕ್ಕೆ ಮನೆಗೆ ಕಳಿಸಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಉಪವಾಸ ಕುಳಿತ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹಬ್ಬಕ್ಕೆ ಮನೆಗೆ ಕಳಿಸಬೇಕು ಎಂದು ಸುಕ್ರಜ್ಜಿ ಉಪವಾಸ ಕುಳಿತಿದ್ದಾರೆ. ಸುಕ್ರಿ ಬೊಮ್ಮಗೌಡ ಹಠದಿಂದ ವೈದ್ಯರು ಕಕ್ಕಾಬಿಕ್ಕಿಯಾಗಿದ್ದಾರೆ. ಸುಕ್ರಿ ಬೊಮ್ಮಗೌಡ ಉಪವಾಸ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಅವರನ್ನು ಮನೆಗೆ ಕರೆದೊಯ್ದಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿನ ಜಿಲ್ಲಾಸ್ಪತ್ರೆಯಿಂದ ಮನೆಗೆ ಶಿಫ್ಟ್‌ ಮಾಡಲಾಗಿದೆ. ಆಕ್ಸಿಜನ್ ಸಮೇತ ಅಂಕೋಲದ ಬಡಿಗೇರಿ ನಿವಾಸಕ್ಕೆ ಶಿಫ್ಟ್‌ ಮಾಡಲಾಗಿದೆ. ಸುಕ್ರಿ ಬೊಮ್ಮಗೌಡ ಕಳೆದ ಒಂದು ವಾರದಿಂದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಯಿಂದ ಸುಕ್ರಜ್ಜಿ ಬಳಲಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಸುಕ್ರಿ ಬೊಮ್ಮಗೌಡ ಯಾರು?
ಸುಕ್ರಿ ಬೊಮ್ಮಗೌಡ ಉತ್ತರ ಕನ್ನಡ ಜಿಲ್ಲೆಯ ಬಡಿಗೇರಿ ಎಂಬಲ್ಲಿನವರು. ಅವರು ಬುಡಕಟ್ಟು ಸಮುದಾಯವಾದ ಹಾಲಕ್ಕಿ ಒಕ್ಕಲಿಗ ಪಂಗಡಕ್ಕೆ ಸೇರಿದವರು. ಸಾಂಪ್ರದಾಯಿಕ ಬುಡಕಟ್ಟು ಸಂಗೀತ ಕ್ಷೇತ್ರದಲ್ಲಿನ ಅವರ ಕೆಲಸಗಳಿಗೆ ಪದ್ಮಶ್ರೀ ಸಹಿತ ಹಲವು ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಲಭಿಸಿದೆ. ಅವರು ತಮ್ಮ ಸಮುದಾಯದ ಇತರರಿಗೆ ಸಾಂಪ್ರದಾಯಿಕ ಹಾಡುಗಳನ್ನು ಕಲಿಸಿ ಕೊಡುತ್ತಾರೆ. ಆ ಮೂಲಕ ಅದರ ಉಳಿವಿಗೆ ಶ್ರಮಿಸಿದ್ದಾರೆ. ಸುಕ್ರಿ ಬೊಮ್ಮಗೌಡ ಅವರು ಸುಕ್ರಜ್ಜಿ ಎಂದು ಮತ್ತು ಹಾಲಕ್ಕಿ ಕೋಗಿಲೆ/ ಜನಪದ ಕೋಗಿಲೆ ಎಂದೂ ಕರೆಯಲ್ಪಟ್ಟಿದ್ದಾರೆ.

ಹಾಲಕ್ಕಿ ಸಮುದಾಯ
ಹಾಲಕ್ಕಿ ಸಮುದಾಯದವರು ಉತ್ತರ ಕನ್ನಡದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕಾಣಸಿಗುತ್ತಾರೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಕೂಗು ಬಹಳ ಹಿಂದಿನಿಂದಲೂ ಇದೆ. ಈ ಸಮುದಾಯವನ್ನು ಆಫ್ರಿಕಾದ ಮಸಾಯಿ ಸಮುದಾಯಕ್ಕೆ ಹೋಲಿಸಲಾಗುತ್ತದೆ.

ಇದನ್ನೂ ಓದಿ: ದೀಪಾವಳಿ ಹಬ್ಬದ ಶುಭಾಶಯ ಕೋರಿದ ಜೋ ಬೈಡೆನ್; ವೈಟ್​ಹೌಸ್​ನಲ್ಲಿ ದೀಪಾವಳಿ ಆಚರಣೆ

ಇದನ್ನೂ ಓದಿ: ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿ ನೀಡುವೆ: ಸುಕ್ರಿ ಬೊಮ್ಮಗೌಡ

TV9 Kannada


Leave a Reply

Your email address will not be published. Required fields are marked *