ದೀಪಾವಳಿಯ ಮರುದಿನ ದೆಹಲಿಯಲ್ಲಿ ತೀವ್ರವಾಗಿ ಹದಗೆಟ್ಟ ಗಾಳಿಯ ಗುಣಮಟ್ಟ , ಮುಂಬೈಯಲ್ಲಿ ಸಾಧಾರಣ | After Diwali Delhi’s air quality recorded severe Mumbai remains moderate


ದೀಪಾವಳಿಯ ಮರುದಿನ ದೆಹಲಿಯಲ್ಲಿ ತೀವ್ರವಾಗಿ ಹದಗೆಟ್ಟ ಗಾಳಿಯ ಗುಣಮಟ್ಟ , ಮುಂಬೈಯಲ್ಲಿ ಸಾಧಾರಣ

ದೆಹಲಿಯಲ್ಲಿ ವಾತಾವರಣ

ದೆಹಲಿ: ಗುರುವಾರ ತಡರಾತ್ರಿ ಮತ್ತು ಶುಕ್ರವಾರದಂದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿಷಕಾರಿ ಹೊಂಜು (Smog) ಹೊದಿಕೆಯಡಿಯಲ್ಲಿಯೇ ಉಳಿದಿವೆ. ರಾಜ್ಯ ಸರ್ಕಾರವು ಪಟಾಕಿ ನಿಷೇಧ ಹೇರಿದ್ದರೂ ಜನರು ಪಟಾಕಿ ಸಿಡಿಸುವುದನ್ನು ಮುಂದುವರೆಸಿದ್ದಾರೆ.ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುತ್ತಿದ್ದು ನಗರದ ವಾಯು ಗುಣಮಟ್ಟ ಸೂಚ್ಯಂಕವು 4 ಗಂಟೆಗೆ 382 ರಷ್ಟಿತ್ತು, ಗುರುವಾರ ರಾತ್ರಿ 8 ರ ಸುಮಾರಿಗೆ ಗಂಭೀರ ವಲಯವನ್ನು ಪ್ರವೇಶಿಸಿತು. ಕಡಿಮೆ ತಾಪಮಾನ ಮತ್ತು ಗಾಳಿಯ ವೇಗವು ಮಾಲಿನ್ಯಕಾರಕಗಳ ಶೇಖರಣೆಗೆ ಅವಕಾಶ ಮಾಡಿಕೊಟ್ಟಿತು. ನೆರೆಯ ನಗರಗಳಾದ ಫರಿದಾಬಾದ್ (424), ಘಾಜಿಯಾಬಾದ್ (442), ಗುರ್‌ಗಾಂವ್ (423) ಮತ್ತು ನೋಯ್ಡಾ (431) ಸಹ ಗಾಳಿಯ ಗುಣಮಟ್ಟವನ್ನು ಗಂಭೀರವಾಗಿ ಹದಗೆಟ್ಟಿದ್ದು, ರಾತ್ರಿ 9 ಗಂಟೆಯ ನಂತರ ಪಟಾಕಿ ಸಿಡಿಸಿದ್ದರಿಂದ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆಯು (SAFAR) ಗಾಳಿಯ ಗುಣಮಟ್ಟವು ಇಂದು ಕೂಡ “ಗಂಭೀರವಾಗಿಯೇ” ಇರಲಿದೆ ಎಂದು ಹೇಳಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿಯ ಪ್ರಕಾರ ರಾಷ್ಟ್ರ ರಾಜಧಾನಿಯಾದ್ಯಂತ ಬಹುತೇಕ ಎಲ್ಲಾ ಮೇಲ್ವಿಚಾರಣಾ ಕೇಂದ್ರಗಳು AQI ಮಟ್ಟವನ್ನು 450 ಕ್ಕಿಂತ ಹೆಚ್ಚು ದಾಖಲಿಸಿವೆ.

301 ರಿಂದ 400 ಶ್ರೇಣಿಯಲ್ಲಿನ AQI ‘ಅತ್ಯಂತ ಕಳಪೆ’ ಆದರೆ 401 ಮತ್ತು 500 ನಡುವಿನ AQI “ಗಂಭೀರ” ಆಗಿದೆ.
ಅಕ್ಟೋಬರ್ 27 ರಂದು ಪಟಾಕಿಗಳನ್ನು ಸಿಡಿಸುವುದರ ವಿರುದ್ಧ ಜಾಗೃತಿ ಮೂಡಿಸಲು ದೆಹಲಿ ಸರ್ಕಾರವು ‘ಪಟಾಖೇ ನಹಿ ದಿಯೆ ಜಲಾವೋ’ ಅಭಿಯಾನವನ್ನು ಪ್ರಾರಂಭಿಸಿತ್ತು. ಅಭಿಯಾನದ ಅಡಿಯಲ್ಲಿ, ಪಟಾಕಿಗಳನ್ನು ಸುಡುವುದು ಕಂಡುಬಂದರೆ ಅವರ ವಿರುದ್ಧ ಸಂಬಂಧಿತ ಐಪಿಸಿ ನಿಬಂಧನೆಗಳು ಮತ್ತು ಸ್ಫೋಟಕಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು. ಸರ್ಕಾರದ ಪ್ರಕಾರ, ಪಟಾಕಿ ವಿರೋಧಿ ಅಭಿಯಾನದ ಅಡಿಯಲ್ಲಿ 13,000 ಕೆಜಿಗೂ ಹೆಚ್ಚು ಅಕ್ರಮ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 33 ಜನರನ್ನು ಬಂಧಿಸಲಾಗಿದೆ.

ಬೆಳೆ ತ್ಯಾಜ್ಯ ಸುಡುವ ಋತುವಿನಿಂದಾಗಿ ದೆಹಲಿಯು ಈಗಾಗಲೇ ಕಳಪೆ ಗಾಳಿಯ ಗುಣಮಟ್ಟದಿಂದ ತತ್ತರಿಸಿದೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಗುರುವಾರ ಬೆಳಿಗ್ಗೆ ಕುಸಿದಿದೆ ಮತ್ತು AQI “ಅತ್ಯಂತ ಕಳಪೆ” ವಿಭಾಗದಲ್ಲಿದೆ.

ಪಟಾಕಿ ಸಿಡಿಸುವುದು ಇಲ್ಲದಿದ್ದರೂ ಗುರುವಾರ ರಾತ್ರಿಯ ವೇಳೆಗೆ ಗಾಳಿಯ ಗುಣಮಟ್ಟವು “ಅತ್ಯಂತ ಕಳಪೆ” ಮತ್ತು “ಗಂಭೀರ” ವರ್ಗದ ಅಂಚಿಗೆ ಮತ್ತಷ್ಟು ಕುಸಿಯುತ್ತದೆ ಎಂದು ಸಫರ್ (SAFAR) ವ್ಯವಸ್ಥೆ ಮುನ್ಸೂಚನೆ ನೀಡಿದೆ. ಪಟಾಕಿ ಸಿಡಿಸುವುದರಿಂದ ಇದು ಮತ್ತಷ್ಟು ಹದಗೆಟ್ಟಿದೆ. ಪಟಾಕಿ ಸುಡುವುದರಿಂದ AQI ಬಹುಶಃ 500-ಅಂಕವನ್ನು ದಾಟಬಹುದು ಎಂದು ಮುನ್ಸೂಚನೆಯು ಸೂಚಿಸಿದೆ.

ಸಫರ್ ಮುನ್ಸೂಚನೆಯ ಪ್ರಕಾರ ದೆಹಲಿಯಲ್ಲಿ ಮಾಲಿನ್ಯಕಾರಕಗಳಿಗೆ ಬೆಳೆ ತ್ಯಾಜ್ಯ ಸುಡುವುದು ಶೇ25ರಷ್ಟು ಕೊಡುಗೆ ನೀಡುತ್ತದೆ. ಇದಕ್ಕೆ ಗಾಳಿಯ ಗುಣಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಬೆಳೆ ಅವಶೇಷಗಳ ಸುಡುವಿಕೆಯ ಕೊಡುಗೆಯು ನವೆಂಬರ್ 5 ರಂದು ಸುಮಾರು ಶೇ35 ಕ್ಕೆ ಮತ್ತು ನವೆಂಬರ್ 6 ಮತ್ತು 7 ರಂದು ಶೇ40 ಕ್ಕೆ ಏರಲಿದೆ.

ಮುಂಬೈ
ದೀಪಾವಳಿ ರಾತ್ರಿಯಲ್ಲಿ ಭಾರೀ ಮಾಲಿನ್ಯದ ಮುನ್ಸೂಚನೆಯಂತೆ, ಮುಂಬೈ ಸುಮಾರು 149-165 ರ ಮಧ್ಯಮ AQI ಗೆ ಸಾಕ್ಷಿಯಾಯಿತು. ಈ ವಾರದ ಆರಂಭದಿಂದಲೂ, ನಗರದ AQI ಕಳಪೆ ವರ್ಗದಲ್ಲಿದೆ, ಅಂದರೆ, 201 ಮತ್ತು 300 ರ ನಡುವೆ ಇದೆ.  ಸಫರ್ ಪ್ರಕಾರ, PM 2.5 ಸಾಂದ್ರತೆಯು 75 ಮೈಕ್ರೋಗ್ರಾಂಗಳು/ಕ್ಯೂಬಿಕ್ ಮೀಟರ್ ಆಗಿತ್ತು, ಇದು ದೈನಂದಿನ ಸುರಕ್ಷತೆಯ ಮಿತಿಗಿಂತ 1.2 ಪಟ್ಟು ಹೆಚ್ಚು. ನ್ಯಾಷನಲ್ ಆಂಬಿಯಂಟ್ ಏರ್ ಕ್ವಾಲಿಟಿ ಮಾನದಂಡಗಳ ಪ್ರಕಾರ, PM 2.5 ಗಾಗಿ ದೈನಂದಿನ ಸುರಕ್ಷಿತ ಮಿತಿ 60ug/m3 ಅನ್ನು ನಿರ್ವಹಿಸಬೇಕು. PM 2.5 ನಗರದ ಪ್ರಮುಖ ಮಾಲಿನ್ಯಕಾರಕಗಳಲ್ಲಿ ಒಂದಾಗಿದೆ.

ನಗರದಲ್ಲಿ ಮಾಲಿನ್ಯದ ಮಟ್ಟವು ಹೆಚ್ಚಾಗಲಿದೆ ಮತ್ತು ಶುಕ್ರವಾರ “ಅತ್ಯಂತ ಕಳಪೆ” ವರ್ಗವನ್ನು ತಲುಪಲಿದೆ ಎಂದು ಅದು ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:  ನವೆಂಬರ್ 5 ರಂದು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆ

TV9 Kannada


Leave a Reply

Your email address will not be published. Required fields are marked *