ನವದೆಹಲಿ: ಸುಪ್ರೀಂ ಕೋರ್ಟ್ ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ಬರೋಬ್ಬರಿ 758 ಕೇಸ್ಗಳನ್ನ ದಾಖಲಿಸಿದ್ದಾರೆ.
ಚೆನ್ನೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ದೀಪಾವಳಿ ಹಿನ್ನೆಲೆಯಲ್ಲಿ ಚೆನ್ನೈ ನಗರಾದಾದ್ಯಂತ ಪಟಾಕಿ ಸುಡಲಾಗಿದೆ. ಈ ವೇಳೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿ ಉಲ್ಲಂಘಿಸಲಾಗಿದೆ. ಹೀಗಾಗಿ 758 ಕೇಸ್ ದಾಖಲು ಆಗಿದೆ.
ಕೀಪರ್ಸ್ ವಿರುದ್ಧ 239 ಕೇಸ್
ಸುಪ್ರೀಂ ಕೋರ್ಟ್ ಬೆಳಗ್ಗೆ 6 ರಿಂದ ಸಂಜೆ 7 ಗಂಟೆ ಹಾಗೂ ರಾತ್ರಿ 7 ಗಂಟೆಯಿಂದ 8 ಗಂಟೆಯವರೆಗೆ ಪಟಾಕಿ ಸುಡಲು ಹೇಳಿದೆ. ಆದರೆ ಚೆನ್ನೈನಲ್ಲಿ ಬೇರೆಯವರಿಗೆ ಹರ್ಟ್ ಮಾಡಿ ರಾತ್ರಿಯೆಲ್ಲಾ ಕೆಲವರು ಪಟಾಕಿ ಸುಟ್ಟಿದ್ದಾರೆ ಎನ್ನಲಾಗಿದೆ.
ಮಾತ್ರವಲ್ಲ, ಚೆನ್ನೈ ಪೊಲೀಸರು ಹೆಚ್ಚುವರಿಯಾಗಿ 239 ಕೇಸ್ಗಳನ್ನ ದಾಖಲಿಸಿದ್ದಾರೆ. ಪಟಾಕಿ ಸುಡುವಾಗ ಮೇಲುಸ್ತುವಾರಿ ನೋಡಿಕೊಳ್ಳುವಂತೆ ನಿಯೋಜಿಸಿದ್ದ ಕೀಪರ್ಗಳ ಮೇಲೆ ಈ ಕೇಸ್ ದಾಖಲಾಗಿದೆ. ಇವರು ತಮ್ಮ ಕರ್ತವ್ಯದಲ್ಲಿ ಲೋಪ ಎಸೆಗಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ 32 ಅಂಗಡಿಗಳ ವಿರುದ್ಧವೂ ದೂರು ದಾಖಲಾಗಿದೆ.
The post ದೀಪಾವಳಿ ಸಂಭ್ರಮ, ಚೆನ್ನೈನಲ್ಲಿ ಪಟಾಕಿ ಹೊಡಿದಿದ್ಕೆ 758 ಕೇಸ್ appeared first on News First Kannada.