ಬಿಹಾರ: ನಕಲಿ ಮದ್ಯ ಸೇವಿಸಿ 24 ಮಂದಿ ಸಾವನ್ನಪ್ಪಿ ಹಲವರು ಅಸ್ವಸ್ಥಗೊಂಡಿರುವ ಘಟನೆ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟವರೆಲ್ಲರೂ ತೆಲ್ಹುವಾ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದ್ದು ಚಮರ್ತೋಲಿ ಎಂಬ ಪ್ರದೇಶದಲ್ಲಿ ಮದ್ಯ ಸೇವಿಸಿದ್ದರು ಅಂತ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತಪಟ್ಟವರ ಪೈಕಿ ಸದ್ಯ ಎಂಟು ಮಂದಿಯನ್ನು ಗುರುತಿಸಲಾಗಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ನಾಥ್ ವರ್ಮಾ, ಇದೊಂದು ಅಸಹಜ ಸಾವಿನ ಪ್ರಕರಣ. ಪ್ರಾಥಮಿಕ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಅಂತ ತಿಳಿಸಿದ್ದಾರೆ.