ದೀಪಾವಳಿ ಹಬ್ಬದ ಶುಭಾಶಯ ಕೋರಿದ ಜೋ ಬೈಡೆನ್; ವೈಟ್​ಹೌಸ್​ನಲ್ಲಿ ದೀಪಾವಳಿ ಆಚರಣೆ | America President Joe Biden celebrates and wishes Happy Deepavali 2021 White House Diwali Celebrations


ದೀಪಾವಳಿ ಹಬ್ಬದ ಶುಭಾಶಯ ಕೋರಿದ ಜೋ ಬೈಡೆನ್; ವೈಟ್​ಹೌಸ್​ನಲ್ಲಿ ದೀಪಾವಳಿ ಆಚರಣೆ

ನ್ಯೂಯಾರ್ಕ್: ದೀಪಾವಳಿ ಹಬ್ಬದ ಪ್ರಯುಕ್ತ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್​ ಶುಭಾಶಯ ಕೋರಿದ್ದಾರೆ. ಅಮೆರಿಕಾದ ವೈಟ್ ​ಹೌಸ್​ನಲ್ಲಿ ಬೈಡೆನ್​ ದಂಪತಿ ದೀಪಾವಳಿ ಆಚರಿಸಿದ್ದಾರೆ. ಕತ್ತಲೆ ಬಳಿಕ ಜ್ಞಾನ, ಬುದ್ಧಿವಂತಿಕೆ, ಸತ್ಯವಿದೆ ಎಂಬುದನ್ನು ದೀಪಾವಳಿಯ ಬೆಳಕು ನಮಗೆ ನೆನಪಿಸಲಿ. ಹತಾಶೆಯ ನಂತರ ಭರವಸೆ ಮತ್ತು ವಿವಿಧತೆಯಲ್ಲಿ ಏಕತೆ ಇದೆ ಎಂದು ತಿಳಿಯಲಿ. ದೀಪಾವಳಿ ಹಬ್ಬ ಆಚರಿಸುತ್ತಿರುವವರಿಗೆ ಶುಭಾಶಯಗಳು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಭಹಾರೈಸಿದ್ದಾರೆ.

ಹಿಂದೂ, ಸಿಖ್ಖ್, ಜೈನ್ ಮತ್ತು ಬೌದ್ಧ ಧರ್ಮದವರಿಗೆ, ಅಮೆರಿಕಾದಲ್ಲಿ ಹಾಗೂ ವಿಶ್ವದಾದ್ಯಂತ ದೀಪಾವಳಿ ಹಬ್ಬ ಆಚರಿಸುತ್ತಿರುವ ಎಲ್ಲರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಜೋ ಬೈಡೆನ್ ದಂಪತಿ ಶುಭಹಾರೈಸಿದ್ದಾರೆ. ವೈಟ್​ ಹೌಸ್​ನಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: Diwali 2021 Astrology: ದೀಪಾವಳಿಗೆ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಹಣಕಾಸು ವರ್ಷ ಭವಿಷ್ಯ

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಕಾಶ್ಮೀರದ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ- ಪಾಕಿಸ್ತಾನ ಸೈನಿಕರು

TV9 Kannada


Leave a Reply

Your email address will not be published. Required fields are marked *