ವಿಶ್ವ ಕಂಡ ಅಪ್ರತಿಮ ಬ್ಯಾಡ್ಮಿಂಟನ್​ ಆಟಗಾರ, ಬಾಲಿವುಡ್​ ದೀವಾ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್​ ಪಡುಕೋಣೆಗೆ ಕೊರೊನಾ ಸೋಂಕು ದೃಢಪಟ್ಟಿದೆ. 65 ವರ್ಷದ ಪ್ರಕಾಶ್​ ಪಡುಕೋಣೆ ಕಳೆದ ವಾರದಿಂದ ಜ್ವರದಿಂದ ಬಳಲುತ್ತಿದ್ದು, ಜ್ವರ ಉಲ್ಬಣವಾದ ಕಾರಣ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಾರ ಡಿಸ್ಚಾರ್ಜ್​​ ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿರುವ ಪ್ರಕಾಶ್​ ಪಡುಕೋಣೆ ಕುಟುಂಬ, ಸರಿ ಸುಮಾರು ಹತ್ತು ದಿನಗಳ ಹಿಂದೆ ಕೊರೊನಾ ಸೋಂಕಿತರಾಗಿದ್ದಾರೆ. ಪ್ರಕಾಶ್​ ಪಡುಕೋಣೆ ಜೊತೆಗೆ ಅವರ ಪತ್ನಿ ಹಾಗೂ ಮಗಳು ಅನಿಶಾ ಪಡುಕೋಣೆಗೂ ಕೂಡ ಕೊರೊನಾ ದೃಢಪಟ್ಟಿದೆ. ಪತ್ನಿ ಹಾಗೂ ಮಗಳು ಮನೆಯಲ್ಲೇ ಐಸೋಲೇಟ್​ ಆಗಿದ್ದು, ಪ್ರಕಾಶ್​ ಮಾತ್ರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರು ದಿನಗಳ ಜ್ವರದ ನಂತರ ಶನಿವಾರ ಅಡ್ಮಿಟ್​ ಆದ ಪ್ರಕಾಶ್​ ಪಡುಕೋಣೆ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇನ್ನು 2-3 ದಿನಗಳಲ್ಲಿ ಮನೆಗೆ ವಾಪಾಸಾಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

The post ದೀಪಿಕಾ ಪಡುಕೋಣೆ ತಂದೆಗೆ ಕೊರೊನಾ ಪಾಸಿಟಿವ್​; ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ appeared first on News First Kannada.

Source: newsfirstlive.com

Source link