ದುನಿಯಾ ವಿಜಯ್​ ನಟನೆಯ ತೆಲುಗು ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡ ‘ಸಲಾರ್’ ಬೆಡಗಿ ಶ್ರುತಿ ಹಾಸನ್​ | Shruti Haasan joins the shooting set of Duniya Vijay Nandamuri Balakrishna starrer NBK 107 movie


ದುನಿಯಾ ವಿಜಯ್​ ನಟನೆಯ ತೆಲುಗು ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡ ‘ಸಲಾರ್’ ಬೆಡಗಿ ಶ್ರುತಿ ಹಾಸನ್​

ಗೋಪಿಚಂದ್​ ಮಲಿನೇನಿ, ಶ್ರುತಿ ಹಾಸನ್​

Shruti Haasan: ನಟಿ ಶ್ರುತಿ ಹಾಸನ್​ ಅವರು ಶೂಟಿಂಗ್​ ಸೆಟ್​ಗೆ ಹಾಜರಿ ಹಾಕಿದ್ದಾರೆ. ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕಮಲ್​ ಹಾಸನ್​ ಪುತ್ರಿ, ನಟಿ ಶ್ರುತಿ ಹಾಸನ್​ (Shruti Haasan) ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಭಾಷೆಯ ಚಿತ್ರಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್​ ಕಲಾವಿದರ ಜೊತೆ ನಟಿಸುವ ಅವಕಾಶ ಅವರಿಗೆ ಸಿಗುತ್ತಿದೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷ ಕಳೆದರೂ ಅವರ ಚಾರ್ಮ್​ ಕಮ್ಮಿ ಆಗಿಲ್ಲ. ಪ್ರಭಾಸ್​ ನಟನೆಯ ‘ಸಲಾರ್​’ ಚಿತ್ರಕ್ಕೆ ಅವರು ನಾಯಕಿ. ಆ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಅತ್ತ, ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ 107ನೇ ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಆ ಚಿತ್ರದಲ್ಲಿ ದುನಿಯಾ ವಿಜಯ್ (Duniya Vijay)​ ಅವರು ವಿಲನ್​ ಪಾತ್ರ ಮಾಡುತ್ತಿರುವುದು ವಿಶೇಷ. ಈ ಸಿನಿಮಾದ ಶೂಟಿಂಗ್​ನಲ್ಲಿ ಶ್ರುತಿ ಹಾಸನ್​ ಅವರು ಈಗ ಪಾಲ್ಗೊಂಡಿದ್ದಾರೆ.

ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಎನ್​ಬಿಕೆ 107’ ಎಂದು ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಬಂದಿರುವ ಟೀಸರ್​ ನೋಡಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಅವರ ಎದುರು ದುನಿಯಾ ವಿಜಯ್​ ಖಳನಾಯಕನಾಗಿ ಅಬ್ಬರಿಸಲಿರುವುದರಿಂದ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಿದೆ. ಬಹಳ ದಿನಗಳ ಹಿಂದೆಯೇ ಈ ಚಿತ್ರದ ಶೂಟಿಂಗ್​ ಆರಂಭ ಆಗಿತ್ತು. ಈಗ ಶ್ರುತಿ ಹಾಸನ್​ ಅವರು ಶೂಟಿಂಗ್​ ಸೆಟ್​ ಸೇರಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ನಿರ್ದೇಶಕ ಗೋಪಿಚಂದ್​ ಮಲಿನೇನಿ ಜೊತೆ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಶೂಟಿಂಗ್​ ಸೆಟ್​ಗೆ ಹಾಜರಾದ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

TV9 Kannada


Leave a Reply

Your email address will not be published.