ದುನಿಯಾ ವಿಜಯ್​ ನಿರ್ದೇಶನದ ‘ಭೀಮ’ ಚಿತ್ರದ ಮೇಕಿಂಗ್ ವಿಡಿಯೋ ಕಂಡು ಕಣ್ಣರಳಿಸಿದ ಫ್ಯಾನ್ಸ್​ | Duniya Vijay directorial Bheema movie first schedule shooting completed: Here is the making video‘ಭೀಮ’ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್​ ಮುಕ್ತಾಯ ಆಗಿದೆ. ದುನಿಯಾ ವಿಜಯ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಮೇಕಿಂಗ್​ ವೀಡಿಯೋ ಇಲ್ಲಿದೆ..

TV9kannada Web Team


| Edited By: Madan Kumar

May 22, 2022 | 9:55 AM
ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಗೆದ್ದು ಬೀಗಿದವರು ದುನಿಯಾ ವಿಜಯ್ (Duniya Vijay)​. ಮೊದಲ ಬಾರಿಗೆ ಅವರು ಆ್ಯಕ್ಷನ್​-ಕಟ್​ ಹೇಳಿದ್ದ ‘ಸಲಗ’ ಸಿನಿಮಾ (Salaga Movie) ಸೂಪರ್ ಹಿಟ್​ ಆಯಿತು. ಆ ಬಳಿಕ ಅವರು ಕೈಗೆತ್ತಿಕೊಂಡ ಸಿನಿಮಾ ‘ಭೀಮ’. ಪೋಸ್ಟರ್​ ಮತ್ತು ಶೀರ್ಷಿಕೆ ಮೂಲಕ ಗಮನ ಸೆಳೆದಿರುವ ಈ ಚಿತ್ರಕ್ಕೆ ಈಗ ಭರದಿಂದ ಶೂಟಿಂಗ್​ ನಡೆಯುತ್ತಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಳಿಸಿರುವ ಚಿತ್ರತಂಡ ಮೇಕಿಂಗ್​ ವಿಡಿಯೋ ಹಂಚಿಕೊಂಡಿದೆ. ದುನಿಯಾ ವಿಜಯ್​ ಅವರು ನಿರ್ದೇಶಕನ ಕ್ಯಾಪ್​ ಧರಿಸಿ ಯಾವ ರೀತಿ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ ಎಂಬುದರ ಝಲಕ್​ ಈ ವಿಡಿಯೋದಲ್ಲಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಕೌತುಕ ಮೂಡಿಸಿದೆ. ‘ಭೀಮ’ (Bheema Movie) ಚಿತ್ರದಲ್ಲಿ ವಿಜಯ್​ ಅವರು ಯಾವ ಕಥೆಯನ್ನು ಹೇಳಲಿದ್ದಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *