ದುಬೈನಲ್ಲಿನ ಪ್ರೀ ರಿಲೀಸ್​ ಇವೆಂಟ್​ ದಿಢೀರ್​ ರದ್ದು ಮಾಡಿದ RRR​ ಮತ್ತು ಪುಷ್ಪ-ಕಾರಣವೇನು?


ಇತ್ತೀಚಿನ ದಿನಗಳಲ್ಲಿ ಪ್ಯಾನ್​ ಇಂಡಿಯಾ ಸಿನಿಮಾಗಳ ಪ್ರೀ ರಿಲೀಸ್​ ಇವೆಂಟ್​ಗಳನ್ನು ದುಬೈನಲ್ಲಿ ಮಾಡುವುದು ವಾಡಿಕೆಯಾಗಿದೆ. ರಾಜಮೌಳಿ ನಿರ್ದೇಶನದ RRR ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ನ್ನು ಕೂಡ ದುಬೈನಲ್ಲಿ ಮಾಡಲು ಚಿತ್ರ ತಂಡ ಪ್ಲಾನ್​ ಮಾಡಿತ್ತು. ಆದರೆ ಇದೀಗ ಆ ಪ್ಲಾನ್​ ಅನ್ನು ಚಿತ್ರತಂಡ ಕ್ಯಾನ್ಸಲ್​ ಮಾಡಿದೆ.

ಹೌದು ದುಬೈನಲ್ಲಿ ಪ್ರೀ ರಿಲೀಸ್​ ​ ಇವೆಂಟ್​ ಮಾಡಿದ್ರೆ ತುಂಬಾ ಹಣ ಖರ್ಚಾಗುತ್ತದೆ. ಥ್ರಿಬಲ್​ ಆರ್​ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್, ರಾಮ್​ ಚರಣ್​, ಆಲಿಯಾ ಭಟ್​, ಅಜಯ್​ ದೇವ್​ಗನ್​ ಹೀಗೆ ಸಾಕಷ್ಟು ತಾರಾಬಳಗವೇ ಇರುವುದರಿಂದ ದುಬಾರಿ ಹಣ ಬೇಕಾಗುತ್ತದೆ ಎಂದು ಅರಿತ ​ ಚಿತ್ರ ತಂಡ ದುಬೈ ಟೂರ್​ನ್ನು ಕ್ಯಾನ್ಸ​ಲ್ ಮಾಡಿ ಭಾರತಲ್ಲೇ ಪ್ರೀ ರಿಲೀಸ್​ ಇವೆಂಟ್​ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮತ್ತೊಂದು ಪ್ಯಾನ್​ ಇಂಡಿಯಾ ‘ಪುಷ್ಪ’ ಸಿನಿಮಾ ಕೂಡ ಮೊದಲು ದುಬೈನಲ್ಲಿ ಪ್ರೀ ರಿಲೀಸ್​ ಇವೆಂಟ್​ ಮಾಡಲು ನಿರ್ಧಾರ ಮಾಡಿತ್ತು. ಆದರೆ ಸಿನಿಮಾದ, ಸಾಕಷ್ಟು ಕೆಲಸಗಳು ಬಾಕಿ ಇದ್ದು ದುಬೈಗೆ ತೆರಳಿದರೆ ಸಿನಿಮಾದ ಬಜೆಟ್​ ಮತ್ತಷ್ಟು ಹೆಚ್ಚಾಗಲಿದೆ ಎಂದು ದುಬೈ ಪ್ರವಾಸವನ್ನು ರದ್ದು ಮಾಡಿದ್ದಾರೆ. ಇನ್ನು ಆರ್​ಆರ್​ಆರ್​ ಸಿನಿಮಾ ಮುಂದಿನ ವರ್ಷ ಜನವರಿ 7 ನೇ ತಾರೀಖು ತೆರೆಗೆ ಬರಲು ಸಿದ್ಧವಾಗಿದ್ದರೆ, ​ಪುಷ್ಪ ಡಿಸೆಂಬರ್ 17, 2021 ರಂದು ತೆರೆಗೆ ಬರಲಿದೆ.

News First Live Kannada


Leave a Reply

Your email address will not be published. Required fields are marked *