ದುಬೈನಲ್ಲಿ ರೇಸಿಂಗ್ ಕಾರ್ ಓಡಿಸಿ ಥ್ರಿಲ್ ಆದ ಗಂಗೂಲಿ..!

ದುಬೈನಲ್ಲಿ ರೇಸಿಂಗ್ ಕಾರ್ ಓಡಿಸಿ ಥ್ರಿಲ್ ಆದ ಗಂಗೂಲಿ..!

ಐಪಿಎಲ್ ಮರು ಆಯೋಜನೆ ಸಂಬಂಧ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸದ್ಯ ಅರಬ್‌ ನಾಡಿನಲ್ಲಿ ಬೀಡು ಬಿಟ್ಟಿದ್ದಾರೆ. ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿ, ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕುರಿತು ಸ್ಥಳೀಯ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸುಲು ದುಬೈನಲ್ಲಿರುವ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಬಿಡುವಿನ ವೇಳೆಯಲ್ಲಿ ಕಾರ್ ರೇಸ್‌ನಲ್ಲಿ ಪಾಲ್ಗೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಗಂಗೂಲಿ ಕಾರ್ ರೇಸ್‌ಗೆ ಹೋಗಲು ಸಿದ್ಧವಾಗುತ್ತಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೋಟೋಗೆ ಅಭಿಮಾನಿಗಳ ಫುಲ್ ಫಿದಾ ಆಗಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಗಂಗೂಲಿ ಫೋಟೋ ವೈರಲ್ ಆಗ್ತಿದ್ದಂತೆ, ದಾದಾ ಆ ಫೋಟೋವನ್ನ ಡಿಲೀಟ್ ಮಾಡಿದ್ದಾರೆ.

 

The post ದುಬೈನಲ್ಲಿ ರೇಸಿಂಗ್ ಕಾರ್ ಓಡಿಸಿ ಥ್ರಿಲ್ ಆದ ಗಂಗೂಲಿ..! appeared first on News First Kannada.

Source: newsfirstlive.com

Source link