ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಕೋಟಿ ಕೋಟಿ ಹಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು, ತನಿಖೆ ಕೈಗೆತ್ತಿಕೊಂಡ ಇ.ಡಿ | Black and white money racket case in bangalore taken over by ed officials


ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಕೋಟಿ ಕೋಟಿ ಹಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು, ತನಿಖೆ ಕೈಗೆತ್ತಿಕೊಂಡ ಇ.ಡಿ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಶುರುವಾಗಿದೆ. ಕೆಲ ದಿನಗಳ ಹಿಂದೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣ ಬೆಳಕಿಗೆ ತಂದಿದ್ದರು. ಸದ್ಯ ಈಗ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.

ಕೇರಳಾ ಮೂಲದ ಕಿಂಗ್ ಪಿನ್ಗಳು ನಗರವನ್ನು ದಂಧೆಯ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರ ಟೀಂ ಜೂನ್ ನಲ್ಲಿ ಬೆಂಗಳೂರಿಗೆ ಆಗಮಿಸಿತ್ತು. ಫೈಜಲ್, ಅಬ್ದುಲ್ ಮುನಾಫ್, ಫಾಸಿಲ್, ಮೊಹಮ್ಮದ್ ಸಾಲಿಯರ ಗ್ಯಾಂಗ್ ಕಂಡು ಕಾಣದಂತೆ ದೂರದಲ್ಲಿದ್ದ ಕಿಂಗ್ ಪಿನ್ ರಿಯಾಜ್ ಜೊತೆ ಸಂಪರ್ಕ ಹೊಂದಿರುತ್ತಿತ್ತು. ಕಿಂಗ್ ಪಿನ್ ರಿಯಾಜ್ ಹೇಳಿದಂತೆ ಕಂಪ್ಲೀಟ್ ಬ್ಲಾಕ್ ಅಂಡ್ ವೈಟ್ ದಂಧೆ ನಡೆಯುತಿತ್ತು.

ಐಟಿ ಉದ್ಯೋಗಿಗಳ ಮಾದರಿ ಟಾರ್ಗೆಟ್ ಕೊಟ್ಟು ಕೆಲಸ ಮಾಡಿಸುತ್ತಿದ್ದರು. ಹಾಗೂ ವಾಟ್ಸ್ ಗ್ರೂಪ್ ಮಾಡಿಕೊಂಡಿದ್ದ ದಂಧೆ ಕೊರರಿಂದ ಐಟಿ ಮಾದರಿ ವೈಟ್ ಬ್ಲ್ಯಾಕ್ ದಂಧೆ ನಡೆಯುತ್ತಿತ್ತು. ದಂಧೆ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದ ನಾಲ್ವರಿಗೆ, ರಿಯಾಜ್ ಒಂದು ದಿನಕ್ಕೆ 20 ಲಕ್ಷ ಟಾರ್ಗೆಟ್ ನೀಡ್ತಿದ್ದ. ದುಬೈನಿಂದ ಕೇರಳ ಮೂಲಕ ಬೆಂಗಳೂರಿಗೆ ಹವಾಲ ಹಣ ಬರುತ್ತಿತ್ತು. ಗೂಡ್ಸ್ ಲಾರಿಯಲ್ಲಿ ಕಾರ್ಟನ್ ನಲ್ಲಿ ಹಣ ತರಲಾಗುತ್ತಿತ್ತು. ಬಳಿಕ ಹಣವನ್ನು ಪಡೆದು ರಿಯಾಜ್ ಸೂಚನೆಯಂತೆ ಆತ ಹೇಳಿಕ ಅಕೌಂಟ್ ಗೆ ಹಣವನ್ನು ಡೆಪಾಸಿಟ್ ಮಾಡಲಾಗುತ್ತಿತ್ತು. ಎಲ್ಲೋ ಕೂತು ಬೆಂಗಳೂರಿನಲ್ಲಿ ತನ್ನ ಟೀಂ ಜೊತೆ ರಿಯಾಜ್ ವ್ಯವಹಾರ ನಡೆಸುತ್ತಿದ್ದ. ಏನು ಮಾಡಬೇಕು, ಏನು ಬೇಡ ಎಂದು ಲೀಡ್ ಮಾಡುತ್ತಿದ್ದ.

ದಂಧೆಕೋರರಿಗೆ ರಿಯಾಜ್ ನೀಡುತಿದ್ದ ತಿಂಗಳ ಸಂಬಳ ತಲಾ 60 ಸಾವಿರ ಆಗಿತ್ತು. ಇದನ್ನು ಹೊರತಾಗಿ ಅಲಯನ್ಸ್ ಸೇರಿ ತಲಾ 15 ಸಾವಿರ ಕೊಡುತ್ತಿದ್ದ. ಸದ್ಯ ರಿಯಾಜ್ ಹೇಳಿದಂತೆ ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಕೋಟಿ ಕೋಟಿ ಹಣವನ್ನು ಕೆಲವು ಅಕೌಂಟ್ಗಳಿಗೆ ಹಾಕಲಾಗಿದೆ. ಸದ್ಯ ಈಗ ಹೆಚ್ಚು ಹೂಡಿಕೆ ಮಾಡಿರುವ ಅಕೌಂಟ್ಗಳನ್ನ ಫ್ರೀಜ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ನಾಪತ್ತೆಯಾಗಿರುವ ಕಿಂಗ್ ಪಿನ್ ರಿಯಾಜ್ಗಾಗಿ ಶೋಧ ನಡೆಯುತ್ತಿದೆ. ಪುಟ್ಟೇನಹಳ್ಳಿ ಪೊಲೀಸರಿಂದ ಮಾಹಿತಿ ಪಡೆದು ಇ.ಡಿ ತನಿಖೆ ಆರಂಭಿಸಿದೆ.

TV9 Kannada


Leave a Reply

Your email address will not be published. Required fields are marked *