ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲು | Two youths drowned to death in lake in Bengaluru


ದಸರಾ ನಿಮಿತ್ತ ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲಾಗಿದ್ದಾರೆ.

ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲು

ಸಾಂಧರ್ಬಿಕ ಚಿತ್ರ

ಬೆಂಗಳೂರು: ದಸರಾ ನಿಮಿತ್ತ ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ತೆರಳಿದ್ದ ಯುವಕರು ನೀರುಪಾಲಾಗಿದ್ದಾರೆ. ಮಹಾರಾಷ್ಟ್ರ ಮೂಲದ ಸೋಮೇಶ್(21), ಜಿತು(22) ಮೃತ ದುರ್ದೈವಿಗಳು. ದಸರಾ ನಿಮಿತ್ತ ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ಎಂದು ಐವರು ಕೆಂಗೇರಿಯ ಸುಣಕಲ್ ಪಾಳ್ಯಕೆರೆಗೆ ಹೋಗಿದ್ದಾರೆ. ಆಗ ಕೆರೆಯಲ್ಲಿ ಐವರು ಯುವಕರು ಇಳಿದಿದ್ದಾರೆ. ಈ ವೇಳೆ ಐವರ ಪೈಕಿ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಐವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಆರ್.ಆರ್.ನಗರದಲ್ಲಿ‌ ವಾಸವಿದ್ದರು. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯಾ ನಡೆದಿದೆ. ಸದ್ಯ ಕತ್ತಲಾಗಿರುವುದರಿಂದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.