ದೂರ ಇದ್ದರೂ ಹೃದಯ ಹತ್ತಿರ.. ವಿಕ್ಕಿ, ಕತ್ರಿನಾರದ್ದೇ ವಿಶೇಷ ಪ್ರೇಮಿಗಳ ದಿನ


ಇತ್ತೀಚೆಗೆ ಮದುವೆಯಾದ ಬಾಲಿವುಡ್​​​ನ ಸೂಪರ್​​ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಯಾರಿಗೂ ಹೇಳದೆ ​​ ಸೀಕ್ರೇಟ್​​ ಆಗಿ ಮದುವೆ ಆದ ಈ ಜೋಡಿ, ಮೊದಲ ಪ್ರೇಮಿಗಳ ದಿನಾಚರಣೆ ಮಾಡಿದೆ.

ಇಷ್ಟು ದಿನ ಮದುವೆ, ಹನಿಮೂನ್ ಎಲ್ಲವೂ ಮುಗಿಸಿ ಮತ್ತೆ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿ ಆಗಿದ್ದ ಈ ಜೋಡಿ ವ್ಯಾಲೆಂಟೈನ್​​ ಡೇಗೆ ಏನ್​​ ಪ್ಲಾನ್​ ಮಾಡಿರಬಹುದು ಎಂಬ ಕುತೂಹಲ ಇತ್ತು. ಈಗ ಇಬ್ಬರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇಂದು ಒಟ್ಟಿಗೆ ಇರಲಾಗದಿದ್ದಕ್ಕೆ ಬೇಸರ ಹೊರಹಾಕಿದ್ದಾರೆ.

ಇಬ್ಬರು ಜೊತೆಯಲ್ಲಿರೋ ಫೋಟೋ ಶೇರ್​ ಮಾಡಿ, ಎವರಿಡೇ ಈಸ್​​ ಸ್ಪೆಷಲ್​ ಡೇ ವಿತ್​ ಯೂ ಎಂದು ವಿಕ್ಕಿ ಹೇಳಿದರೆ, ನಾವಿಂದು ಒಟ್ಟಿಗೆ ಡಿನ್ನರ್​ ಮಾಡದಿರಬಹುದು. ಆದರೆ, ನೀನು ಎಂಥಾ ಕಷ್ಟದ ಸಂದರ್ಭದಲ್ಲೂ ನನ್ನೊಂದಿಗೆ ಇರ್ತೀಯಾ ಅನ್ನೋದೆ ಖುಷಿ ಎಂದು ಕತ್ರಿನಾ ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published.