"ದೃಶ್ಯ" ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ  ನಿರ್ದೇಶಕ ಪಿ. ವಾಸು ಜೋಡಿ ಇದೀಗ "ದೃಶ್ಯ 2" ಮೂಲಕ ಮತ್ತೆ ಒಂದಾಗುತ್ತಿದೆ. ಇತ್ತೀಚೆಗೆ ಮಲಯಾಳಂನಲ್ಲಿ ತೆರೆಕಂಡು ಯಶಸ್ವಿಯಾಗಿದ್ದ "ದೃಶ್ಯಂ 2" ರಿಮೇಕ್ ನಲ್ಲಿ ಈ ಇಬ್ಬರೂ ಮತ್ತೆ ಸೇರುತ್ತಿದ್ದಾರೆ.

ಜಿತು ಜೋಸೆಫ್ ನಿರ್ದೇಶನದ ಮತ್ತು ಮೋಹನ್ ಲಾಲ್ ಅಭಿನಯದ "ದೃಶ್ಯಂ 2" ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಅದ್ಭುತ ಪ್ರತಿಕ್ರಿಯೆ ಪಡೆದಿದೆ.

ಕನ್ನಡದಲ್ಲಿ  E4 ಎಂಟರ್‌ಟೈನ್‌ಮೆಂಟ್ ಸಂಸ್ಥೆ ಯುಗಾದಿಯ ಶುಭ ಸಮಯದಂದು ರಿಮೇಕ್ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

"ದೃಶ್ಯ" ಚಿತ್ರದಲ್ಲಿ ಅಭಿನಯಿಸಿದ್ದ ನವ್ಯ ನಾಯರ್, ಆರೋಹಿ ನಾರಾಯಣ್, ಪ್ರಭು, ಆಶಾ ಶರತ್ ಮತ್ತು ಉನ್ನತಿ ಈ ಚಿತ್ರದ ಮುಂದಿನ ಭಾಗದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅದೇ ವೇಳೆ ನಟ ಪ್ರಮೋದ್ ಶೆಟ್ಟಿ ಈ ಸಿನಿಮಾ ಸೆಟ್ ಗೆ ಹೊಸದಾಗಿ ಸೇರಲಿದ್ದಾರೆ. ಉಳಿದ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.

 ಜಿ.ಎಸ್.ವಿ. ಸೀತಾರಾಂ ಚಿತ್ರಕ್ಕೆ ಕ್ಯಾಮರಾ ಕೆಲಸ ನಿರ್ವಹಿಸಲಿದ್ದು ಹಿನ್ನೆಲೆ ಸಂಗೀತಗಾರರನ್ನು ಇನ್ನೂ ಅಂತಿಮಗೊಳಿಸಿಲ್ಲ. ಚಿತ್ರವನ್ನು ಮುಖೇಶ್ ಆರ್ ಮೆಹ್ತಾ ಮತ್ತು ಸಿ.ವಿ.ಸಾರಥಿ ನಿರ್ಮಿಸಲಿದ್ದಾರೆ. ಈ ಯೋಜನೆಯು ಮೇ ತಿಂಗಳಲ್ಲಿ ಪ್ರೊಡಕ್ಷನ್ ಪ್ರಾರಂಭ ಮಾಡಲಿದೆ ಎನ್ನಲಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More