ದೆಹಲಿಯತ್ತ ಸಿಎಂ.. ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ ಮತ್ತೊಂದು ಪಿಸುಮಾತು


ಉಪಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ರಾಜ್ಯದಲ್ಲಿಲ್ಲದ ವೇಳೆಯೇ ಸ್ವಪಕ್ಷದ ಸಚಿವರು ಮತ್ತು ಶಾಸಕರು ಪಿಸುಮಾತಿನ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ತವರಲ್ಲೆ ಕಮಲ ಬಾಡಿರೋದಕ್ಕೆ ಕಾರಣ ತಿಳಿಸಲಿರುವ ಸಿಎಂ
ಉಪಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮೊದಲ ಬಾರಿಗೆ ಸಿಎಂ ಬೊಮ್ಮಾಯಿ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಉಪಕದನದಲ್ಲಿ ಸೋಲು ಗೆಲುವಿನ ಕುರಿತಾಗಿ ವರಿಷ್ಠರಿಗೆ ಬೊಮ್ಮಾಯಿ ಮಾಹಿತಿ ನೀಡಲಿದ್ದಾರೆ. ಈಗಾಗ್ಲೆ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿಯವರನ್ನ ಬೇಟಿ ಮಾಡಿ ಸಿಎಂ ಮಾತುಕತೆ ನಡೆಸಿದ್ದಾರೆ.

ಮಾಧ್ಯಮದವರ ಮುಂದೆ ಸೋಮಣ್ಣ-ಯತ್ನಾಳ್ ಮನದಮಾತು
ರಾಜ್ಯ ರಾಜಕೀಯದಲ್ಲಿ ಕೆಲದಿನಗಳ ಹಿಂದಷ್ಟೆ ಪಿಸುಮಾತೊಂದು ಭಾರಿ ಸದ್ದು ಮಾಡಿತ್ತು. ಕೈ ಪಡೆಯಿಂದ ಹೊರಬಂದ ಆ ಪಿಸುಮಾತಿನ ಸದ್ದು ಅಡಗೋ ಮುನ್ನವೆ, ಕಮಲಕೋಟೆಯಿಂದ ಮತ್ತೊಂದು ಪಿಸುಮಾತು ಹೊರಬಂದಿದೆ. ಈ ಪಿಸುಮಾತು ಕೇಸರಿ ಪಡೆಯಲ್ಲಿನ ಅಸಮಾಧಾನದ ಹೊಗೆಯನ್ನ ಬಹಿರಂಗಗೊಳಿಸಿದೆ.

ಅತ್ತ ಸಿಎಂ ದೆಹಲಿಯಲ್ಲಿ ವರಿಷ್ಠರಿಗೆ ಉಪಚುನಾವಣೆ ಸೋಲು-ಗೆಲುವಿನ ಮಾಹಿತಿ ನೀಡೋಕೆ ಪರದಾಡ್ತಿದ್ರೆ. ಇತ್ತ ರಾಜ್ಯದ್ಲಲಿ ಉಪಚುನಾವಣೆಯ ಉಸ್ತುವಾರಿ ಬಗ್ಗೆ ಅಸಮಾಧಾನ ತೋರುವ ಸೋಮಣ್ಣ- ಯತ್ನಾಳ್ ರ ಪಿಸುಮಾತು ಮಾಧ್ಯಮದವರ ಸಮ್ಮುಖದಲ್ಲೇ ಮೊಳಗಿದೆ.

ಒಂದು ಪಿಸುಮಾತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನೆ ಇಕ್ಕಟ್ಟಿಗೆ ಸಿಲುಕಿಸಿತ್ತು. ಇದೀಗ ಮತ್ತೊಂದು ಪಿಸುಮಾತು ಹೊರಬಂದಿದ್ದು, ಇದ್ಯಾರನ್ನ ಇಕ್ಕಟ್ಟಿಗೆ ಸಿಲುಕಿಸುತ್ತೋ ಅನ್ನೊ ಪ್ರಶ್ನೆಯು ಉದ್ಭವಿಸಿದೆ. ಹಾನಗಲ್‌ ಚುನಾವಣೆಯ ಉಸ್ತುವಾರಿಯನ್ನ ಯತ್ನಾಳ್ ಮತ್ತು ಸೋಮಣ್ಣರಿಗೆ ಕೊಟ್ಟಿದ್ರೆ ಇಷ್ಟೊತ್ತಿಗೆ ಹಾನಗಲ್‌ನಲ್ಲಿ ಬಿಜೆಪಿ ಜಯಭೇರಿ ಪಡೆದಿರುತ್ತಿತ್ತು ಅನ್ನೊದೆ ಈ ಪಿಸುಮಾತಿನ ಸಾರಾಂಶವಾಗಿದೆ.

News First Live Kannada


Leave a Reply

Your email address will not be published. Required fields are marked *