ದೆಹಲಿಯಲ್ಲಿ ಕಂಟ್ರೋಲ್​ಗೆ ಬಾರದ ಕೊರೊನಾ: ಮುಂಬೈ ಮಾದರಿ ಅನುಸರಿಸಲು ಕೇಜ್ರಿವಾಲ್ ತೀರ್ಮಾನ

ದೆಹಲಿಯಲ್ಲಿ ಕಂಟ್ರೋಲ್​ಗೆ ಬಾರದ ಕೊರೊನಾ: ಮುಂಬೈ ಮಾದರಿ ಅನುಸರಿಸಲು ಕೇಜ್ರಿವಾಲ್ ತೀರ್ಮಾನ

ನವದೆಹಲಿ: ಮುಂಬೈ ನಗರ ಮಾದರಿಯಲ್ಲಿ ಕೋವಿಡ್ ಕಂಟ್ರೋಲ್​ ಮಾಡಲು ದೆಹಲಿ ಸರ್ಕಾರ ಪ್ಲಾನ್​ ಮಾಡುತ್ತಿದೆ. ಮುಂಬೈನಲ್ಲಿ ಈ ಹಿಂದೆ ದಿನವೊಂದಕ್ಕೆ 15 ಸಾವಿರಷ್ಟಿದ್ದ ಪಾಸಿಟಿವ್ ಕೇಸ್​​ಗಳ ಸಂಖ್ಯೆ ಸದ್ಯ 2.5 ಸಾವಿರಕ್ಕೆ ಇಳಿಕೆಯಾಗಿದೆ. ಈ ಹಿನ್ನೆಲೆ ಇತ್ತೀಚೆಗೆ ದೆಹಲಿ ಹೈಕೋರ್ಟ್ ಮುಂಬೈ ಮಾದರಿಯನ್ನ ಅನುಸರಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಕೋರ್ಟ್​​ನ ಸೂಚನೆಯಂತೆ ಇದೀಗ ದೆಹಲಿ ಸರ್ಕಾರ ಮುಂಬೈ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಮುಂಬೈ ಮಾದರಿಯಂತೆಯೇ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ದೆಹಲಿ ಅನುಸರಿಸಲಿರುವ ಕ್ರಮಗಳೇನು..?

  1. ಹೆಚ್ಚೆಚ್ಚು ಕಂಟೈನ್ಮೆಂಟ್​ ಝೋನ್​ಗಳನ್ನ ಗುರುತಿಸುವುದು.
  2. ಹೆಚ್ಚು ಪ್ರಕರಣ ಕಂಡುಬರುತ್ತಿರುವ ಏರಿಯಾಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಬುಲೆನ್ಸ್​​ಗಳನ್ನ ನಿಯೋಜನೆ ಮಾಡುವುದು.
  3. ಕೊರೊನಾ ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದು.
  4. ಜನನಿಭಿಡ ಪ್ರದೇಶಗಳಲ್ಲಿ ಹೆಚ್ಚಿನ ಕೊರೊನಾ ಟೆಸ್ಟ್​ಗಳನ್ನು ನಡೆಸಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು.

The post ದೆಹಲಿಯಲ್ಲಿ ಕಂಟ್ರೋಲ್​ಗೆ ಬಾರದ ಕೊರೊನಾ: ಮುಂಬೈ ಮಾದರಿ ಅನುಸರಿಸಲು ಕೇಜ್ರಿವಾಲ್ ತೀರ್ಮಾನ appeared first on News First Kannada.

Source: newsfirstlive.com

Source link