ನವದೆಹಲಿ: ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆ ದೆಹಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ಕೊರೊನಾದಿಂದ ಕನ್ನಡಿಗರು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ನಿನ್ನೆ ನಂಜುಂಡಸ್ವಾಮಿ ಎಂಬವರು ಸೇರಿದಂತೆ ಇಬ್ಬರು ಕನ್ನಡಿಗರು ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊರೊನಾ ಬಂದರೆ ಸೂಕ್ತ ಚಿಕಿತ್ಸೆ, ಆಸ್ಪತ್ರೆ  ಸಿಗುತ್ತಿಲ್ಲ ಎಂದು ಹೇಳಲಾಗ್ತಿದೆ.

ಈ ಹಿನ್ನೆಲೆ ಕರ್ನಾಟಕ ರಾಜ್ಯ ಸರ್ಕಾರ, ದೆಹಲಿಯಲ್ಲಿರೋ ಮೂರು ಕರ್ನಾಟಕ ಭವನಗಳನ್ನ ಕರ್ನಾಟಕದ ಜನರಿಗೆ ಕೋವಿಡ್ ಸೆಂಟರ್​​ಗಳಾಗಿ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಹೇಗೂ ಕೊರೊನಾ ಮುಗಿಯೋವರೆಗೆ ಯಾರೂ ಕರ್ನಾಟಕ ಭವನದತ್ತ ಸುಳಿಯೋದಿಲ್ಲ. ಸಾವಿರಾರು ಕಿಲೋ ಮೀಟರ್ ದೂರ ಬಂದಿರೋ ಕನ್ನಡಿಗರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಾಗಿದೆ ಅಂತ ದೆಹಲಿ ಕನ್ನಡ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ಅಲ್ಲದೇ ಹಲವು ಕನ್ನಡಿಗರು ದೆಹಲಿಯಲ್ಲಿರೋ ಕರ್ನಾಟಕ ಭವನವೇನು ಬರೀ ಸಚಿವರ CD ಮಾಡೋಕಾ? ಅಂತಾ ಕೂಡ ಆಕ್ರೋಶದಿಂದ ಪ್ರಶ್ನಿಸಿದ್ದಾರೆ.

The post ದೆಹಲಿಯಲ್ಲಿ ಕನ್ನಡಿಗರು ಕೊರೊನಾಗೆ ಬಲಿ; ಕರ್ನಾಟಕ ಭವನವೇನು CD ಮಾಡೋಕೆ ಮಾತ್ರಾನಾ? appeared first on News First Kannada.

Source: newsfirstlive.com

Source link