ದೆಹಲಿಯಲ್ಲಿ ಪೆಟ್ರೋಲ್​ ರೇಟ್ ಮತ್ತಷ್ಟು ಕಮ್ಮಿ; ಇಂದು ಮಧ್ಯರಾತ್ರಿಯಿಂದ 8 ರೂಪಾಯಿ ಇಳಿಕೆ 


ನವದೆಹಲಿ: ತೈಲಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ದೆಹಲಿ ಜನರಿಗೆ ಕೇಜ್ರಿವಾಲ್ ಸರ್ಕಾರ ಕೊಂಚ ನಿರಾಳದ ಸುದ್ದಿಯನ್ನ ನೀಡಿದೆ. ದೆಹಲಿ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಕಡಿಮೆ ಮಾಡಿದೆ. ಕೇಜ್ರಿವಾಲ್ ಸರ್ಕಾರದ ನಿರ್ಧಾರದ ನಂತರ ದೆಹಲಿಯಲ್ಲಿ ಪೆಟ್ರೋಲ್ ರೇಟ್ 8 ರೂಪಾಯಿಗಳಷ್ಟು ಅಗ್ಗವಾಗಲಿದೆ. ಅದರಂತೆ ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ಒಂದು ಲೀಟರ್ ಪೆಟ್ರೋಲ್ ಬೆಲೆ 95.97 ರೂ.ಪಾಯಿ ಆಗಲಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ದೆಹಲಿ ಸರ್ಕಾರ ಈ ನಿರ್ಧಾರವನ್ನ ಕೈಗೊಂಡಿದೆ. ಸಭೆಯಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇಕಡಾ 30 ರಿಂದ 19.40ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಇಂದು ರಾತ್ರಿಯಿಂದ ಪೆಟ್ರೋಲ್ ರೇಟ್ ಪ್ರತಿ ಲೀಟರ್​​ಗೆ 8 ರೂಪಾಯಿ ಕಡಿಮೆ ಆಗಲಿದೆ.

ಕಳೆದ 27 ದಿನಗಳಿಂದ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಈ ವರ್ಷದ ಆರಂಭದಿಂದಲೂ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು, ನಂತರ ಪೆಟ್ರೋಲ್ ಬೆಲೆ 5 ರೂ ಮತ್ತು ಡೀಸೆಲ್ 10 ರೂ. ಇಳಿಕೆಯಾಗಿತ್ತು.

News First Live Kannada


Leave a Reply

Your email address will not be published. Required fields are marked *